ಈಗ ಟೋಮೇಟೋ ಬೆಲೆ ತುಂಬಾ ಕಡಿಮೆ ಆಗಿದೆ! ಈಗ ಟೋಮೇಟೋ ಮೊರಬ್ಬ ಮಾಡಿಟ್ಟರೆ ಯಾವಾಗ ಬೇಕಾದರೂ ಉಪಯೋಗಿಸಬಹುದು.

ಮಾಡುವ ವಿಧಾನ:-

2 ಕೇಜಿ ಟೋಮೇಟೋ ತೊಳೆದಿಡಿ.

 

ಬಾಣಲೆಯಲ್ಲಿ 4 ಲೀಟರ್ ನೀರು ಹಾಕಿ ಕುದಿಯಲು ಇಡಿ. ನೀರು ದೊಡ್ಡದಾಗಿ ಕುದಿ ಬರಲು ಪ್ರಾರಂಭವಾದಾಗ ಟೋಮೇಟೋಗಳನ್ನು ನೀರಿಗೆ ಹಾಕಿ. 2 ನಿಮಿಷದ ನಂತರ ಒಲೆಯಿಂದ ಇಳಿಸಿ, ತಟ್ಟೆ ಮುಚ್ಚಿ 15 ನಿಮಿಷ ಬಿಡಿ. ನಂತರ ಟೋಮೇಟೋ ಹೊರ ತೆಗೆದು ತಣ್ಣಗಾದ ನಂತರ ಟೋಮೇಟೋ ಸಿಪ್ಪೆ, ತೊಟ್ಟಿನ ಭಾಗ ತೆಗೆದು ನುಣ್ಣಗೆ ರುಬ್ಬಿಡಿ.

  

ರುಬ್ಬಿದ ಮಿಶ್ರಣವನ್ನು ಸೋರಿ ಹಾಕಿ.

ದಪ್ಪ ತಳದ ಬಾಣಲೆಯಲ್ಲಿ ಟೋಮೇಟೋ ರಸ ಹಾಕಿ ಕುದಿಯಲು ಇಡಿ. ಮಧ್ಯಮ ಉರಿಯಲ್ಲಿ ಆಗಾಗ ತಿರುಗಿಸುತ್ತಾ ಇರಿ. 1 ಟೀ ಚಮಚ ಸಕ್ಕರೆ, 1 ಟೀ ಚಮಚ ಉಪ್ಪು ಹಾಕಿ ಕಲೆಸಿ, ಮಿಶ್ರಣ ಕಾಲು ಭಾಗದಷ್ಟು ಆಗುವವರೆಗೆ ಕುದಿಸಿ.

  

ತಣ್ಣಗಾದ ನಂತರ Sterilise ಮಾಡಿದ ಗಾಜಿನ ಬಾಟಲಿ ಯಲ್ಲಿ ಹಾಕಿ, Fridge ನಲ್ಲಿಟ್ಟು ಬೇಕಾದಾಗ ಉಪಯೋಗಿಸಿ.

ಸಾರು, ಸಾಂಬಾರ್, ಗೊಜ್ಜು, ಸೂಪ್ ಹೀಗೆ ಯಾವುದು ಬೇಕಾದರೂ ಮಾಡಬಹುದು.

  

ಅಥವಾ Ice cube tray ನಲ್ಲಿ ಹಾಕಿಟ್ಟು ಬೇಕಾದಾಗ ಉಪಯೋಗಿಸಬಹುದು!

ಧನ್ಯವಾದಗಳು