ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ! ಎಲ್ಲರಿಗೂ ಇಷ್ಟವಾಗುವ ಆಹಾರ! ಒಬ್ಬೊಬ್ಬರದು ಒಂದೊಂದು ಶೈಲಿ! ಇದು ನಾನು ಮಾಡುವ ವಿಧಾನ!

5 ಟೋಮೇಟೋ, 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಚಿಕ್ಕ ಬಟ್ಟಲು ಬಟಾಣಿ ಬಿಡಿಸಿಡಿ.

1 ಚಿಕ್ಕ ಬೆಳ್ಳುಳ್ಳಿ, 1 ಇಂಚು 2, 4 ಹಸಿ ಮೆಣಸಿನಕಾಯಿ, 4 ಚಮಚ ಕಾಯಿ ತುರಿ, 1 ಚಮಚ ಪುದೀನಾ, 1 ಚಮಚ ಕೊತ್ತಂಬರಿ ಸೊಪ್ಪು ರುಬ್ಬಿಡಿ.

1 ಲೋಟ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ.

  

ಕುಕ್ಕರಿನಲ್ಲಿ 5 ಚಮಚ ಎಣ್ಣೆ ಹಾಕಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ ಹಾಕಿ ಹುರಿದು, ಹೆಚ್ಚಿದ ಈರುಳ್ಳಿ, 5 ಟೋಮೇಟೋ, ರುಬ್ಬಿದ ಮಿಶ್ರಣ, ಉಪ್ಪು, ಅಕ್ಕಿ ಸೇರಿಸಿ ಸ್ವಲ್ಪ ಹುರಿದು 2 ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ 1 ಅಥವಾ 2 ವಿಷಲ್ ಕೂಗಿಸಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಯಾದ ಟೋಮೇಟೋ ಬಾತ್ ಸಿದ್ಧ!

  

ಇದೇ ರೆಸಿಪಿಯಲ್ಲಿ ಸಾಧಾರಣ ಅಕ್ಕಿಯ ಬದಲು ಬಾಸುಮತಿ ಅಕ್ಕಿ ಹಾಕಿದರೆ ಟೋಮೇಟೋ ಪಲಾವ್ ರೆಡಿ!

ನಿಮಗೆ ಇಷ್ಟವಾಗುವ ರೀತಿಯಲ್ಲಿ ಮಾಡಿಕೊಳ್ಳಿ.

ಧನ್ಯವಾದಗಳು