ಅವರೆಯ ಇನ್ನೊಂದು ರುಚಿಯಾದ ರೆಸಿಪಿ!

ಮಾಡುವ ವಿಧಾನ:-

ಎಳೆಯದಾದ ಅವರೆ ಕಾಳು 1 ಪಾವು ತೊಳೆದು ನೀರು ಸೋರಿ ಹಾಕಿಡಿ.

1 ಟೇಬಲ್ ಚಮಚ ಬಿಳಿ ಎಳ್ಳು, 1 ಟೀ ಚಮಚ ಜೀರಿಗೆ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.

4 ಚಮಚ ಕಾಯಿ ತುರಿದಿಡಿ.

4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿಡಿ.

  

ಕುಕ್ಕರಿನಲ್ಲಿ 4 ಚಮಚ ಬೆಣ್ಣೆ ಹಾಕಿ , ಸಾಸಿವೆ, ಕರಿಬೇವು, ಅವರೆ ಕಾಳು, ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿದು, ಉಪ್ಪು, ಕಾಳು ಮುಳುಗುವಷ್ಟು ನೀರು ಹಾಕಿ ಮುಚ್ಚಳ ಹಾಕಿ ಮೂರ್ನಾಲ್ಕು ವಿಷಯ ಕೂಗಿಸಿ.

  

ನಂತರ ಕಾಯಿ ತುರಿ, ಎಳ್ಳಿನ ಪುಡಿ, ಕೊತ್ತಂಬರಿ ಸೊಪ್ಪು, 1/2 ಹೋಳು ನಿಂಬೆ ರಸ ಹಾಕಿ ಚೆನ್ನಾಗಿ ಕಲೆಸಿದರೆ ರುಚಿಯಾದ, ಸೊಗಡಿನ ಅವರೆಯ ಬೆಣ್ಣೆ ಅವರೆ ಉಸಲಿ ಸಿದ್ಧ!

ಈರುಳ್ಳಿ ಇಷ್ಟವಾಗುವವರು 1 ಈರುಳ್ಳಿ ಸಣ್ಣಗೆ ಹೆಚ್ಚಿ ಒಗ್ಗರಣೆಗೆ ಹಾಕಬಹುದು!

ಚಪಾತಿ, ಪೂರಿ, ದೋಸೆ ಜೊತೆಗೆ ತುಂಬಾ ಚೆನ್ನಾಗಿರುತ್ತದೆ!

ನಿಮಗೆ ಸಮಯವಿದ್ದರೆ ಕುಕ್ಕರಿನಲ್ಲಿ ಒಗ್ಗರಣೆ ಹಾಕಿ ಮುಚ್ಚಳ ಹಾಕದೆ ತಟ್ಟೆ ಮುಚ್ಚಿ, ತಟ್ಟೆಯ ಒಳಗೆ ಸ್ವಲ್ಪ ನೀರು ಹಾಕಿ ಬೇಯಿಸಬಹುದು. ಆಗ ಅವರೆ ಕಾಳು ನಿಧಾನವಾಗಿ ಬೇಯುತ್ತದೆ. ರುಚಿಯಾಗೂ ಇರುತ್ತದೆ. ಈ ರೀತಿ ನಮ್ಮ ಅಮ್ಮ ಮಾಡುತ್ತಿದ್ದರು!

ಧನ್ಯವಾದಗಳು