BELEGALA PADDU ಬೇಳೆಗಳ ಪಡ್ಡು

Categories: Kannada, upaharaPublished On: December 26, 20170 Comments0.7 min read
Indu Jayaram
SHARE

ಪಡ್ಡು ಬೆಳಿಗ್ಗೆ ತಿಂಡಿಗಳಲ್ಲಿ ಬಹಳ ಜನಪ್ರಿಯವಾದದ್ದು. ಬೇಳೆಗಳ ಪಡ್ಡು ಆರೋಗ್ಯಕರ ಮತ್ತು ರುಚಿಕರ!

ಮಾಡುವ ವಿಧಾನ:-

ದೋಸೆ ಅಕ್ಕಿ – 1/2 ಲೋಟ
ತೊಗರಿ ಬೇಳೆ – 1/2 ಲೋಟ
ಕಡಲೇ ಬೇಳೆ – 1/2 ಲೋಟ
ಹೆಸರು ಬೇಳೆ – 1/2 ಲೋಟ
ಉದ್ದಿನ ಬೇಳೆ – 1/2 ಲೋಟ
ಗಟ್ಟಿ ಅವಲಕ್ಕಿ – 2 ಚಮಚ
ಮೆಂತ್ಯ – 1/2 ಚಮಚ

ಮೇಲಿನ ಸಾಮಗ್ರಿಗಳನ್ನು ತೊಳೆದು 2 ಗಂಟೆ ನೆನೆಸಿಡಿ. ಎರಡು ಹಸಿ ಮೆಣಸಿನಕಾಯಿ ಜೊತೆಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ.

 

ಬೆಳಿಗ್ಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿ ಪಡ್ಡು ತವಾದಲ್ಲಿ ಹಾಕಿ ಪಡ್ಡು ಮಾಡಬಹುದು!

  

ಈ ಮಿಶ್ರಣವನ್ನು ರುಬ್ಬಿದ ತಕ್ಷಣ ಬೇಕಾದರೂ ಪಡ್ಡು ಮಾಡಬಹುದು. ಅಥವಾ ಮರುದಿನ ಬೇಕಾದರೂ ಮಾಡಬಹುದು!

 

ಕಡಲೇ ಬೇಳೆ ಚಟ್ನಿ ಮಾಡುವ ವಿಧಾನ:-

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ 2 ಚಮಚ ಕಡಲೇ ಬೇಳೆ ಹಾಕಿ ಸ್ವಲ್ಪ ಹುರಿದು, ನಂತರ 1 ಹೆಚ್ಚಿದ ಈರುಳ್ಳಿ, 4 ಬ್ಯಾಡಗಿ ಮೆಣಸಿನಕಾಯಿ ಹಾಕಿ ಹುರಿದಿಡಿ.

ಸ್ವಲ್ಪ ತಣ್ಣಗಾದ ನಂತರ 2 ಚಮಚ ಕಾಯಿ ತುರಿ, 1 ಚಮಚ ಹುಣಿಸೆ ರಸ, ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಚಟ್ನಿ ರುಬ್ಬಿ. ಕೊನೆಯಲ್ಲಿ ಸಾಸಿವೆ, ಇಂಗು ಒಗ್ಗರಣೆ ಹಾಕಿದರೆ ರುಚಿಯಾದ ಕಡಲೇ ಬೇಳೆ ಚಟ್ನಿ ಸಿದ್ಧ!

ಧನ್ಯವಾದಗಳು

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment