MASALA PAPPAD ಮಸಾಲಾ ಪಾಪ್ಪಡ್
ಹೋಟೆಲ್ ಗಳಿಗೆ ಹೋದಾಗ ಮರೆಯದೆ ತಿನ್ನುವ Starter! ಮನೆಯಲ್ಲಿಯೇ ಸುಲಭವಾಗಿ, ರುಚಿಯಾಗಿ, ಶುಚಿಯಾಗಿ ಮಾಡುವ ವಿಧಾನ ಇಲ್ಲಿದೆ!
ಮೆಣಸು ಹಾಕಿರುವ ಹಪ್ಪಳಗಳನ್ನು ಎಣ್ಣೆಯಲ್ಲಿ ಕರಿದಿಡಿ/ Oven ನಲ್ಲಿ ಸುಟ್ಟಿಡಿ.
2 ಈರುಳ್ಳಿ ಸಣ್ಣಗೆ ಹೆಚ್ಚಿಡಿ.
2 ಟೋಮೋಟೋ ಸಣ್ಣಗೆ ಹೆಚ್ಚಿಡಿ.
1 ಚಿಕ್ಕ ಕ್ಯಾರೆಟ್ ತುರಿದಿಡಿ.
4 ಚಮಚ ತೆಂಗಿನ ಕಾಯಿ ತುರಿದಿಡಿ.
ಕೊತ್ತಂಬರಿ ಸೊಪ್ಪು ಸ್ವಲ್ಪ ಸಣ್ಣಗೆ ಹೆಚ್ಚಿಡಿ.
ಮೇಲೆ ಕೊಟ್ಟಿರುವ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ, 1 ಚಮಚ ಖಾರಾದ ಪುಡಿ, ಉಪ್ಪು, ಸ್ವಲ್ಪ ನಿಂಬೆ ರಸ ಹಾಕಿ ಚೆನ್ನಾಗಿ ಕಲೆಸಿ.
ಒಂದೊಂದೇ ಹಪ್ಪಳ ತಟ್ಟೆಯಲ್ಲಿ ಜೋಡಿಸಿ, ಮೇಲೆ ಈರುಳ್ಳಿ ಮಿಶ್ರಣವನ್ನು ಉದುರಿಸಿ ತಕ್ಷಣ ಸವಿಯಿರಿ!
ಮೊದಲೇ ಮಾಡಿಟ್ಟರೆ ಹಪ್ಪಳ ಮೆತ್ತಗೆ ಆಗುತ್ತದೆ.ಈರುಳ್ಳಿ ಮಿಶ್ರಣ ಹಾಕಿದ ತಕ್ಷಣ ತಿನ್ನಬೇಕು.
ಸಂಜೆ ವೇಳೆಗೆ ಮಕ್ಕಳು ಶಾಲೆಯಿಂದ ಬಂದ ತಕ್ಷಣ ತಿನ್ನಲು, ಕಾಫಿ, ಟೀ ಜೊತೆಗೆ ಕೂಡ ತುಂಬಾ ಚೆನ್ನಾಗಿರುತ್ತದೆ!
ಧನ್ಯವಾದಗಳು