ಅವರೆ ಕಾಯಿಯ ಸೀಸನ್ ನಲ್ಲಿ ಅವರೆಯ ವಿಧ ವಿಧವಾದ ತಿಂಡಿ ಮಾಡಬಹುದು! ಅದರಲ್ಲಿ ರುಚಿಯಾದ ಹಿದುಕಿದ ಬೇಳೆ ಪಲಾವ್ ಕೂಡ ಒಂದು!

ಮಾಡುವ ವಿಧಾನ:-

1 ಲೋಟ ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆನೆಸಿ, ನೀರು ಸೋರಿ ಹಾಕಿಡಿ.

  

1 ಲೋಟ ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿಡಿ.

1 ಚಿಕ್ಕ ಕಟ್ಟು ಪುದೀನಾ, 1/2 ಕಟ್ಟು ಕೊತ್ತಂಬರಿ ಸೊಪ್ಪು, 1 ಸಿಪ್ಪೆ ತೆಗೆದ ಬೆಳ್ಳುಳ್ಳಿ, 1 ಇಂಚು ಶುಂಠಿ, 6 ಹಸಿ ಮೆಣಸಿನಕಾಯಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ.

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ ಹಾಕಿ ಹುರಿದು, ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ಬಾಸುಮತಿ ಅಕ್ಕಿ, ಹಿದುಕಿದ ಬೇಳೆ, ಉಪ್ಪು ಹಾಕಿ ಸ್ವಲ್ಪ ಹುರಿದು, 2 ಲೋಟ ನೀರು ಹಾಕಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿದರೆ ರುಚಿಯಾದ ಹಿದುಕಿದ ಬೇಳೆ ಪಲಾವ್ ಸಿದ್ಧ!

  

ಮೊಸರು ಬಜ್ಜಿಯೊಂದಿಗೆ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು