ಉತ್ತರ ಕರ್ನಾಟಕದ ಜನಪ್ರಿಯ ತಿನಿಸು ಜುಣಕಾ, ಜೋಳದ ರೊಟ್ಟಿಯೊಂದಿಗೆ ಜುಣಕಾ ಇದ್ದರೆ, 2 ರೊಟ್ಟಿ ಹೆಚ್ಚಿಗೆ ತಿನ್ನಬಹುದು. ಜುಣಕಾ ಬೇರೆ ಬೇರೆ ರೀತಿ ಮಾಡುತ್ತಾರೆ. ನಮ್ಮ ಮನೆಯಲ್ಲಿ ಈ ರೀತಿ ಮಾಡುತ್ತೇನೆ, ಅದನ್ನೇ ನಾನಿಲ್ಲಿ ಹಂಚಿ ಕೊಳ್ಳುತ್ತಿದ್ದೇನೆ.

ಮಾಡುವ ವಿಧಾನ:-

2 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

6 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

  

2 ಚಮಚ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು ತರಿ ತರಿಯಾಗಿ ಪುಡಿ ಮಾಡಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಅಜವಾನ, ಈರುಳ್ಳಿ, ಹಸಿ ಮೆಣಸಿನ ಕಾಯಿ, ಕರಿಬೇವು, ಅರಿಷಿಣ, ಹಾಕಿ ಬಾಡಿಸಿ, ಹುರಿದ ಶೇಂಗಾ ಪುಡಿ, ಚೂರು ಬೆಲ್ಲ (optional), ಉಪ್ಪು, 1 1/4 ಬಟ್ಟಲು ನೀರು ಹಾಕಿ, ಕುದಿ ಬಂದ ಮೇಲೆ 1 ಬಟ್ಟಲು ಕಡಲೇ ಹಿಟ್ಟನ್ನು ಸ್ವಲ್ಪ ಸ್ವಲ್ಪ ಹಾಕಿ, ಕೊತ್ತಂಬರಿ ಸೊಪ್ಪು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ, ಗಟ್ಟಿಯಾದ ಮೇಲೆ ( ಬೇಕಾದರೆ) ನಿಂಬೆ ರಸ ಸೇರಿಸಿ ಎಣ್ಣೆ ಸವರಿದ ತಟ್ಟೆಗೆ ಹಾಕಿ, ಮೇಲೆ ಸ್ವಲ್ಪ ಎಳ್ಳು, ಕೊಬ್ಬರಿ ತುರಿ ಉದುರಿಸಿ, ತಟ್ಟಿ ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ತುಂಡು ಮಾಡಿ ಚಪಾತಿ ಅಥವಾ ಜೋಳದ ರೊಟ್ಟಿ ಜೊತೆ ಬಡಿಸಿ. ಇದನ್ನು ಕೆಲವರು ಗೀರು ವಡೆ ಎಂದುಾ ಕರೆಯುತ್ತಾರೆ, ರುಚಿಯಾಗಿ, ಸುಲಭವಾಗಿ ಮಾಡಬಹುದು.

ಧನ್ಯವಾದಗಳು