ಹೋಳಿಗೆ ಸಾಮಾನ್ಯವಾಗಿ ಎಲ್ಲರೂ ಸಿಹಿ ಮಾಡುವುದು. ಹೀಗೊಮ್ಮೆ ಮಾಡಿ ನೋಡಿ! ಖಂಡಿತ ನಿಮಗೆ ಇಷ್ಟವಾಗುತ್ತದೆ!

ಮಾಡುವ ವಿಧಾನ:-

  

2 ಕಟ್ಟು ಪಾಲಕ್ ಸೊಪ್ಪನ್ನು ಬಿಡಿಸಿ ತೊಳೆದು ಬಾಣಲೆಯಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ. 4 ಹಸಿ ಮೆಣಸಿನ ಕಾಯಿ, 4 ಚಮಚ ಕಾಯಿ ತುರಿಯೊಂದಿಗೆ ನೀರು ಹಾಕದೆ ರುಬ್ಬಿಕೊಳ್ಳಿ. ತೆಳು ಅವಲಕ್ಕಿ 1/2 ಬಟ್ಟಲು, ನೀರಲ್ಲಿ ತೊಳೆದು, ಸೋರಿ ಹಾಕಿ, ಕಿವುಚಿ, ರುಬ್ಬಿದ ಮಿಶ್ರಣದೊಂದಿಗೆ, ಉಪ್ಪು ಸೇರಿಸಿ ಹೂರಣ ತಯಾರಿಸಿ ಕೊಳ್ಳಿ.

1/2 ಬಟ್ಟಲು ಮೈದಾ, 1/2 ಬಟ್ಟಲು ಚಿರೋಟಿ ರವೆ, ಚಿಟಿಕೆ ಉಪ್ಪು ಸೇರಿಸಿ ಕಲೆಸಿ 1 ಗಂಟೆ ನೆನೆಯಲು ಬಿಡಿ. ನಂತರ ಪಾಲಾಕ್ ಮಿಶ್ರಣದ ಚಿಕ್ಕ ಉಂಡೆಗಳನ್ನು ಮಾಡಿ ಕಣಕದೊಳಗೆ ಇಟ್ಟು ತಟ್ಟಿ ಬಿಸಿ ಹೆಂಚಿನ ಮೇಲೆ ಹಾಕಿ ಬೇಯಿಸಿ, ಚಟ್ನಿ/ ಮೊಸರಿನೊಂದಿಗೆ ಬಿಸಿಯಾಗಿ ಬಡಿಸಿರಿ.

ಅವಲಕ್ಕಿ ಬದಲಾಗಿ ಬೇಯಿಸಿದ ಆಲೂಗಡ್ಡೆ ಬೇಕಾದರೆ ಬಳಸಬಹುದು. ಬೆಳಗ್ಗಿನ ಉಪಾಹಾರಕ್ಕೆ ಬಹಳ ಚೆನ್ನಾಗಿರುತ್ತದೆ.

ಧನ್ಯವಾದಗಳು