CHIVDA ಚಿವ್ಡಾ
ಸಂಜೆ ವೇಳೆಗೆ ಕಾಫಿ, ಟೀ ಜೊತೆಗೆ ಖಾರಾ ಖಾರಾ ಏನಾದರೂ ತಿನ್ನಬೇಕು ಅನ್ನಿಸುತ್ತದೆ! ಹೀಗೆ ಮಾಡಿಡಿ ವಾರವಾದರೂ ಗರಿ ಗರಿಯಾಗಿರುತ್ತದೆ!
ಮಾಡುವ ವಿಧಾನ:-
1/4 ಕೇಜಿ ಪೇಪರ್ ಅವಲಕ್ಕಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಡಿ.
ಅಥವಾ Oven ನಲ್ಲಿ ಒಂದು ನಿಮಿಷ ಬಿಸಿ ಮಾಡಿ ಪೂರ್ತಿಯಾಗಿ ತಣ್ಣಗಾಗಲು ಬಿಡಿ. ಪೂರ್ತಿಯಾಗಿ ತಣ್ಣಗಾದ ಮೇಲೆ ಗರಿಗರಿಯಾಗಿರುತ್ತದೆ. ನಾನು Oven ನಲ್ಲಿಯೇ ಮಾಡಿರುವುದು. ಈಗ ಛಳಿಗಾಲ ಆಗಿರುವುದರಿಂದ ಅಂಗಡಿಯಿಂದ ತಂದ ಅವಲಕ್ಕಿ ಮೆತ್ತಗಿರುತ್ತದೆ. ನಾನು ಕಡಲೇ ಪುರಿ ( ಮಂಡಕ್ಕಿ ) ಮೆತ್ತಗಾದರೂ ಹೀಗೆ ಮಾಡುವುದು.
1/2 ಬಟ್ಟಲು ಒಣ ಕೊಬ್ಬರಿ ತೆಳ್ಳಗೆ ಹೆಚ್ಚಿಡಿ.
1 ಚಮಚ ಸಕ್ಕರೆ ಪುಡಿ ಮಾಡಿಡಿ. ( ಸಕ್ಕರೆ Optional )
4 ಹಸಿ ಮೆಣಸಿನಕಾಯಿ ಸಣ್ಣಗೆ ಉದ್ದಕ್ಕೆ ಸೀಳಿಡಿ.
ಒಂದು ಹಿಡಿ ಕರಿಬೇವು ತೊಳೆದು ಒಣಗಿಸಿಡಿ.
ಬಾಣಲೆಯಲ್ಲಿ 2 ಸೌಟು ಎಣ್ಣೆ ಹಾಕಿ 2 ಹಿಡಿ ಕಡಲೇ ಬೀಜ ಹುರಿದು ತೆಗೆದಿಡಿ.
1 ಹಿಡಿ ಗೋಡಂಬಿ ಹುರಿದು ತೆಗೆದಿಡಿ.
ಹೆಚ್ಚಿದ ಒಣ ಕೊಬ್ಬರಿ ಹುರಿದು ತೆಗೆದಿಡಿ.
ಅದೇ ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಅರಿಷಿಣ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿದು, ಒಂದು ಹಿಡಿ ಹುರಿಗಡಲೆ, 2 ಚಮಚ ಖಾರದ ಪುಡಿ, ಉಪ್ಪು, ಸಕ್ಕರೆ ಪುಡಿ, ಅವಲಕ್ಕಿ ಹಾಕಿ ಸ್ವಲ್ಪ ಹುರಿದು, ನಂತರ ಕರಿದಿಟ್ಟ ಕಡಲೇ ಬೀಜ, ಗೋಡಂಬಿ, ಕೊಬ್ಬರಿ ಚೂರು ಹಾಕಿ ಕಲೆಸಿ, ಕಡಿಮೆ ಉರಿಯಲ್ಲಿ 5 ನಿಮಿಷ ಆಗಾಗ ಕಲೆಸುತ್ತಾ ಬಿಸಿ ಮಾಡಿದರೆ, ರುಚಿಯಾದ, ಸುಲಭವಾಗಿ ಮಾಡಬಹುದಾದ ಅವಲಕ್ಕಿ ಚಿವ್ಡಾ ರೆಡಿ!
ಧನ್ಯವಾದಗಳು!