ರುಚಿಯಾದ, ಆರೋಗ್ಯಕರವಾದ, ಸುಲಭವಾಗಿ ಮಾಡಬಹುದಾದ ಸೂಪ್! ಒಂದು ಬಟ್ಟಲು ಕುಡಿದರೆ ಊಟವೇ ಬೇಡ!!!
ಮಾಡುವ ವಿಧಾನ:-
1 ಕ್ಯಾರೆಟ್, 1 ಕ್ಯಾಪ್ಸಿಕಮ್, 10 ರಿಂದ 12 ಎಳೆಯದಾದ ಹುರುಳಿ ಕಾಯಿ, 1/4 ಭಾಗ ಕ್ಯಾಬೇಜ್ ತೊಳೆದು ದೊಡ್ಡದಾಗಿ ತುರಿದಿಡಿ / ಸಣ್ಣಗೆ ಹೆಚ್ಚಿಡಿ.
5 ಎಸಳು ಬೆಳ್ಳುಳ್ಳಿ,1/2 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ 1 ಚಿಕ್ಕ ಚಮಚ ಎಣ್ಣೆ ಹಾಕಿ, ಬೆಳ್ಳುಳ್ಳಿ, ಶುಂಠಿ ಹಾಕಿ ಹುರಿದು, ಬೀನ್ಸ್, ಕ್ಯಾರೆಟ್ ಹಾಕಿ ಹುರಿದು, ನಂತರ ಕ್ಯಾಬೇಜ್, ಕ್ಯಾಪ್ಸಿಕಮ್ ಹಾಕಿ ಹುರಿದು, 1 ಚಮಚ ವಿನೆಗರ್, 1/2 ಚಮಚ ಸೋಯಾ ಸಾಸ್, 1 ಗ್ರೀನ್ ಚಿಲ್ಲಿ ಸಾಸ್/ ರೆಡ್ ಚಿಲ್ಲಿ ಸಾಸ್, 1/8 ಚಮಚ ಪೆಪ್ಪರ್ ಪುಡಿ, 1 ಚಿಕ್ಕ ಚಮಚ ಕಾರ್ನ್ ಫ್ಲೋರ್ ಸ್ವಲ್ಪ ನೀರಿನಲ್ಲಿ ಹಾಕಿ ಕಲೆಸಿ ಹಾಕಿ, 1 ಲೋಟ ನೀರು ಹಾಕಿ ತರಕಾರಿಗಳನ್ನು 60 % ಬೇಯಿಸಿ.
ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ.
ಮೇಲೆ ಉದುರಿಸಲು ನೂಡಲ್ಸ್ ಮಾಡುವ ವಿಧಾನ:-
ಯಾವುದಾದರೂ ಒಳ್ಳೆಯ ಕಂಪೆನಿಯ 1 ಹಿಡಿ ನೂಡಲ್ಸ್ ನ್ನು ಬಿಸಿ ನೀರಿನಲ್ಲಿ 50 % ಬೇಯಿಸಿ ನೀರು ಸೋರಿ ಹಾಕಿ. ನಂತರ ಒಗೆದ ಬಟ್ಟೆ ಅಥವಾ ಕಿಚನ್ ಟವೆಲ್ ಮೇಲೆ ಹಾಕಿ ನೀರಿನಂಶ ಹೋದ ಮೇಲೆ ಕಾದ ಎಣ್ಣೆಯಲ್ಲಿ ಕರಿದು, ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಟವೆಲ್ ಮೇಲೆ ಹಾಕಿ, ಕುಡಿಯುವ ಮುಂಚೆ ನೂಡಲ್ಸ್ ಮೇಲೆ ಹಾಕಿ ಸವಿಯಿರಿ!
ಈ ಸೂಪ್ ನಲ್ಲಿ ತರಕಾರಿಗಳು ಮತ್ತು ನೂಡಲ್ಸ್ ಎರಡೂ ಇರುವುದರಿಂದ 1 ಬಟ್ಟಲು ಕುಡಿದರೆ ಹೊಟ್ಟೆ ತುಂಬುತ್ತದೆ!
ನಾನು ಗ್ರೀನ್ ಚಿಲ್ಲಿ ಸಾಸ್ ಹಾಕಿರುವುದರಿಂದ ಈ ಬಣ್ಣ ಬಂದಿದೆ! ರೆಡ್ ಚಿಲ್ಲಿ ಸಾಸ್ ಹಾಕಿದರೆ ಕೆಂಪು ಬಣ್ಣ ಬರುತ್ತದೆ!
ಧನ್ಯವಾದಗಳು
Leave A Comment