ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ!

ಮಾಡುವ ವಿಧಾನ :-

10 ರಿಂದ 12 ಬೇಬಿ ಕಾರ್ನ್ ತೊಳೆದು ಸಣ್ಣಗೆ ಹೆಚ್ಚಿ ಎಣ್ಣೆಯಲ್ಲಿ ಕರಿದಿಡಿ/ Half boil ಮಾಡಿಡಿ.

1 ದೊಡ್ಡ ಕ್ಯಾಪ್ಸಿಕಮ್ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ.

1 ಚಿಕ್ಕ ಈರುಳ್ಳಿ, 2 ಟೋಮೋಟೋ, 5 ಬೆಳ್ಳುಳ್ಳಿ ಎಸಳು, 1/2 ಇಂಚು ಶುಂಠಿ, 1 ಹಸಿ ಮೆಣಸಿನಕಾಯಿ, 10 ಗೋಡಂಬಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಡಿ.

ಬಾಣಲೆಯಲ್ಲಿ 2 ಚಮಚ ಬೆಣ್ಣೆ/ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಕ್ಯಾಪ್ಸಿಕಮ್, ಚಿಟಿಕೆ ಅರಿಷಿಣ, ರುಬ್ಬಿದ ಮಸಾಲ ಹಾಕಿ ಸ್ವಲ್ಪ ಬಾಡಿಸಿ, 1/2 ಚಮಚ ಗರಂ ಮಸಾಲ ಪುಡಿ, 1/2 ಚಮಚ ತರಿ ತರಿಯಾಗಿ ಕುಟ್ಟಿದ ಕರಿ ಮೆಣಸು, ಉಪ್ಪು, ಬೇಯಿಸಿದ ಬೇಬಿ ಕಾರ್ನ್, ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಿ.

ಕೊನೆಯಲ್ಲಿ 2 ಚಮಚ ಫ್ರೆಶ್ ಕ್ರೀಮ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಬೇಬಿ ಕಾರ್ನ್ ಪೆಪ್ಪರ್ ಮಸಾಲ ಸವಿಯಲು ಸಿದ್ಧ!

ಧನ್ಯವಾದಗಳು