ಆರೋಗ್ಯಕರವಾದ, ಸುಲಭವಾಗಿ ಮಾಡಬಹುದಾದ ಸೂಪ್! ಈ ಛಳಿಗೆ ಗಂಟಲಿಗೆ ಹಿತವಾಗಿರುತ್ತದೆ!
ಮಾಡುವ ವಿಧಾನ:-
4 ರಿಂದ 6 ಮೀಡಿಯಂ ಟೋಮೇಟೋ ತೊಳೆದಿಡಿ. ಆಪಲ್ ಟೋಮೇಟೋ ಹಾಕಬೇಕು! ಹುಳಿ ಟೋಮೇಟೋ ಬೇಡ! ಪಾತ್ರೆಯಲ್ಲಿ ನೀರು ಕುದಿಯಲು ಇಡಿ. ನೀರು ಕುದಿಯುವಾಗ ಟೋಮೇಟೋಗಳನ್ನು ಇಡಿಯಾಗಿ ಬಿಸಿ ನೀರಿನಲ್ಲಿ ಹಾಕಿ ಒಲೆಯಿಂದ ಇಳಿಸಿ 15 ನಿಮಿಷ ಮುಚ್ಚಿಡಿ! ತಣ್ಣಗಾದ ನಂತರ ಟೋಮೇಟೋ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಡಿ.
5 ಎಸಳು ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ 1 ಚಮಚ ಬೆಣ್ಣೆ ಹಾಕಿ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, 2 ಪಲಾವ್ ಎಲೆ ಹಾಕಿ ಹುರಿದು, 1 ಚಮಚ ಕಾರ್ನ್ ಫ್ಲೋರ್ ಹಾಕಿ ಬಾಡಿಸಿ, ರುಬ್ಬಿದ ಟೋಮೇಟೋ ಮಿಶ್ರಣ, ಉಪ್ಪು, 1/8 ಚಮಚ ಸಕ್ಕರೆ, 1/2 ಚಮಚ ಕರಿ ಮೆಣಸಿನ ಪುಡಿ, ಸ್ವಲ್ಪ ನೀರು ಹಾಕಿ ಕುದಿಯಲು ಇಡಿ.
ಟೋಮೇಟೋ ಸೂಪ್ ಚೆನ್ನಾಗಿ ಕುದಿಸಿ ಕೊನೆಯಲ್ಲಿ 1 ಚಮಚ ಫ್ರೆಶ್ ಕ್ರೀಮ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಆರೋಗ್ಯಕರವಾದ ಟೋಮೇಟೋ ಸೂಪ್ ಸಿದ್ಧ!
ನಿಮಗೆ ಬೇಕಾದರೆ ಈರುಳ್ಳಿ ಸಣ್ಣಗೆ ಹೆಚ್ಚಿ ಬೆಳ್ಳುಳ್ಳಿ ಜೊತೆಗೆ ಹಾಕಬಹುದು. (ನಾನು ಹಾಕಿಲ್ಲ)
ಬ್ರೆಡ್ ತುಂಡುಗಳು ಮಾಡುವ ವಿಧಾನ:-
ಸಾಲ್ಟ್ ಬ್ರೆಡ್ ನ ತುದಿಗಳನ್ನು ತೆಗೆದು ಚಿಕ್ಕ ಚಿಕ್ಕದಾಗಿ ಕತ್ತರಿಸಿ. Micro wave safe ತಟ್ಟೆಗೆ ಹಾಕಿ ಸ್ವಲ್ಪ ತುಪ್ಪ/ ಎಣ್ಣೆ ಸವರಿ 3 ರಿಂದ 4 ನಿಮಿಷ ಬೇಯಿಸಿ. ಆಗಾಗ ಕಲೆಸುವುದನ್ನು ಮರೆಯಬೇಡಿ!
ಅಥವಾ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ಸಾಸ್ ಗೆ ಹಾಕಿ ಸವಿಯಿರಿ!
ಈ ಅಳತೆಯಲ್ಲಿ ಮಾಡಿದ ಸೂಪ್ ನಾಲ್ಕು ಜನ ಕುಡಿಯಬಹುದು! ಸಕ್ಕರೆ ಮತ್ತು ಖಾರಾ ನಿಮ್ಮ ರುಚಿಗೆ ತಕ್ಕಷ್ಟು ಹಾಕಿಕೊಳ್ಳಬಹುದು!
ಧನ್ಯವಾದಗಳು????
????
Leave A Comment