ಈಗ ಸೊಗಡು ಅವರೆ ಕಾಯಿ ಸಿಗುವ ಕಾಲ! ಅವರೆಕಾಳಿನ ರುಚಿಯಾದ ಸಾಂಬಾರ್ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ:-
1 ಪಾವು ಎಳೆಯದಾದ ಅವರೆ ಕಾಳನ್ನು ಬೇಯಿಸಿಡಿ.
1 ಹಸಿ ಈರುಳ್ಳಿ, 2 ಚಮಚ ಸಾಂಬಾರ್ ಪುಡಿ, 1/2 ಚಮಚ ಜೀರಿಗೆ, ಬೆಂದ ಅವರೆ ಕಾಳು 1 ಸೌಟು, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿಡಿ.
ಬೆಂದ ಅವರೆ ಕಾಳಿಗೆ ರುಬ್ಬಿದ ಮಿಶ್ರಣ, ಉಪ್ಪು, 2 ಚಮಚ ಹುಣಿಸೆ ರಸ, ಸ್ವಲ್ಪ ನೀರು ಹಾಕಿ ಕುದಿಯಲು ಇಡಿ.
ಕೊನೆಗೆ ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ ಸಾಂಬಾರಿಗೆ ಸೇರಿಸಿದರೆ ರುಚಿಯಾದ ಅವರೆ ಕಾಳಿನ ಸಾಂಬಾರ್ ಸಿದ್ಧ!
ಈ ಸಾಂಬಾರ್ ರುಚಿ ಹೆಚ್ಚು ಕಡಿಮೆ ಬಸ್ಸಾರಿನ ರುಚಿಗೆ ಹೋಲುತ್ತದೆ!
ಧನ್ಯವಾದಗಳು
Leave A Comment