ಪ್ರತಿ ದಿನ ಸಾಂಬಾರ್, ಸಾರು ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ!

ಮಾಡುವ ವಿಧಾನ:-

ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿ 100 ಗ್ರಾಂ ತೊಗರಿ ಬೇಳೆ / ಹೆಸರು ಬೇಳೆ ಜೊತೆಗೆ ಹಾಕಿ ಬೇಯಿಸಿಡಿ. ಹುರುಳಿ ಕಾಯಿ, ಆಲೂಗೆಡ್ಡೆ, ಕ್ಯಾರೆಟ್, ಕುಂಬಳ, ಸೀಮೆ ಬದನೆ, ಬದನೆ, ನುಗ್ಗೆ ಕಾಯಿ, ಬಟಾಣಿ, ಅವರೆ ಕಾಳು, ನೆನೆಸಿದ ಕಡಲೇ ಬೀಜ ಹೀಗೆ ಸ್ವಲ್ಪ ಸ್ವಲ್ಪ ಹಾಕಬಹುದು. ಅಥವಾ ಯಾವುದಾದರೂ ಸೊಪ್ಪು ಹಾಕಿ ಮಾಡಬಹುದು. ಅಥವಾ ನಿಮ್ಮ ಇಷ್ಟದ ಯಾವುದಾದರೂ ಒಂದು ತರಕಾರಿ ಹಾಕಬಹುದು!

  

ಮಸಾಲೆ ರುಬ್ಬಲು:-

1 ಟೇಬಲ್ ಚಮಚ ಉದ್ದಿನ ಬೇಳೆ, 1 ಟೇಬಲ್ ಚಮಚ ಧನಿಯಾ, 1 ಟೀ ಚಮಚ ಕರಿ ಮೆಣಸು, 4 ರಿಂದ 6 ಬ್ಯಾಡಗಿ ಮೆಣಸಿನಕಾಯಿ ಹುರಿದು, ಸ್ವಲ್ಪ ಕಾಯಿ ತುರಿಯೊಂದಿಗೆ ನುಣ್ಣಗೆ ರುಬ್ಬಿಡಿ. ಖಾರಾ ನಿಮ್ಮ ರುಚಿಗೆ ತಕ್ಕಷ್ಟು ಹಾಕಬಹುದು!

ರುಬ್ಬಿದ ಮಿಶ್ರಣವನ್ನು ಬೆಂದ ಬೇಳೆಗೆ ಹಾಕಿ, ಉಪ್ಪು, ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಿ.

ಕೊನೆಗೆ ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿದರೆ, ರುಚಿಯಾದ ತರಕಾರಿಗಳ ಕೂಟು ಸವಿಯಲು ಸಿದ್ಧ !

ಸಾಧಾರಣವಾಗಿ ಕೂಟಿಗೆ ಹುಣಿಸೆ ರಸ ಹಾಕುವುದಿಲ್ಲ. ನಿಮಗೆ ಹುಳಿ ಬೇಕಾದರೆ ಊಟ ಮಾಡುವಾಗ ನಿಂಬೆ ರಸ ಹಾಕಿಕೊಳ್ಳಬಹುದು!

ಕೂಟು ಒಬ್ಬೊಬ್ಬರದು ಒಂದೊಂದು ಶೈಲಿ! ನಮ್ಮ ಮನೆಯ ವಿಧಾನ ಇದು!

ಧನ್ಯವಾದಗಳು