ರುಚಿಯಾದ, ಸುಲಭವಾಗಿ ಮಾಡಬಹುದಾದ ಲಂಚ್ ಬಾಕ್ಸ್ ಗೆ, ಮಧ್ಯಾಹ್ನದ ಊಟಕ್ಕೆ ಮಾಡಬಹುದಾದ ರೆಸಿಪಿ!

ಬಾತ್ ಪುಡಿ ಮಾಡುವ ವಿಧಾನ:-

ಕಡಲೇ ಬೇಳೆ – 2 ಟೇಬಲ್ ಚಮಚ
ಉದ್ದಿನ ಬೇಳೆ – 1 ಟೇಬಲ್ ಚಮಚ
ಧನಿಯಾ – 1 ಟೀ ಚಮಚ
ಚಕ್ಕೆ – 1/2 ಇಂಚು
ಲವಂಗ – 2
ಒಣ ಕೊಬ್ಬರಿ ತುರಿ – 2 ಟೇಬಲ್ ಚಮಚ
ಬ್ಯಾಡಗಿ ಮೆಣಸಿನಕಾಯಿ – 8 ರಿಂದ 10

ಮೇಲೆ ಹೇಳಿರುವ ಸಾಮಗ್ರಿಗಳನ್ನು ಬೇರೆ ಬೇರೆಯಾಗಿ ಎಣ್ಣೆ ಹಾಕದೆ ಹುರಿದಿಡಿ. ಮೆಣಸಿನಕಾಯಿಗೆ ಮಾತ್ರ ಸ್ವಲ್ಪ ಎಣ್ಣೆ ಹಾಕಿ ಹುರಿದುಎಲ್ಲಾ ಸೇರಿಸಿ ತರಿ ತರಿಯಾಗಿ ಪುಡಿ ಮಾಡಿಡಿ. ಇದು ಆಗ ಹುರಿದು ಆಗಲೇ ಬಾತ್ ಮಾಡಿದರೆ ತಾಜಾ ಆಗಿರುತ್ತದೆ!

 

ಮಿಕ್ಸ್ ವೆಜಿಟೇಬಲ್ ಬಾತ್ ಮಾಡುವ ವಿಧಾನ:-

1 ಪಾವು ಅಕ್ಕಿ ತೊಳೆದು ಉದುರುದುರಾಗಿ ಅನ್ನ ಮಾಡಿಡಿ.

ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಡಿ. ಹುರುಳಿ ಕಾಯಿ, ಆಲೂಗೆಡ್ಡೆ, ಕ್ಯಾರೆಟ್, ಬಟಾಣಿ, ಅವರೆ ಕಾಳು ಇಂತಹ ಗಟ್ಟಿಯಾದ ತರಕಾರಿಗಳನ್ನು Steam ನಲ್ಲಿ ಬೇಯಿಸಿಡಿ. ( Half boiled)

ಕ್ಯಾಪ್ಸಿಕಮ್, ಬದನೇ ಕಾಯಿ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಇಂಗು, ಅರಿಷಿಣ ಹಾಕಿ ಸ್ವಲ್ಪ ಹುರಿದು, ಕ್ಯಾಪ್ಸಿಕಮ್, ಬದನೇ ಕಾಯಿ ಹಾಕಿ ಬಾಡಿಸಿ, ಬೆಂದ ಇತರ ತರಕಾರಿಗಳನ್ನು ಹಾಕಿ ಬಾಡಿಸಿ, ಬಾತ್ ಪುಡಿ, ಉಪ್ಪು, 2 ಚಮಚ ಹುಣಿಸೆ ರಸ ಅಥವಾ ನಿಂಬೆ ರಸ ಹಾಕಿ ಕಲೆಸಿ, ಬೆಂದ ಅನ್ನ ಹಾಕಿ ಕಲೆಸಿ ಸ್ವಲ್ಪ ಬಿಸಿ ಮಾಡಿದರೆ ರುಚಿಯಾದ ಮಿಕ್ಸ್ ವೆಜಿಟೇಬಲ್ ಬಾತ್ ಸಿದ್ಧ!

ಧನ್ಯವಾದಗಳು