ಮಧುಮೇಹಿಗಳಿಗೆ, ಡಯಟ್ ಮಾಡುವವರಿಗೆ ಹೇಳಿ ಮಾಡಿಸಿದ ರೆಸಿಪಿ ಇಲ್ಲಿದೆ! ಪ್ರತಿ ದಿನ ಚಪಾತಿ ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ!

ಮಾಡುವ ವಿಧಾನ:-

ಗೋಧಿ ನುಚ್ಚು – 3 ಕಪ್
ಉದ್ದಿನ ಬೇಳೆ – 1 ಕಪ್
ಗಟ್ಟಿ ಅವಲಕ್ಕಿ – 2 ಚಮಚ
ಮೆಂತ್ಯ – 1/2 ಚಮಚ

  

ಗೋಧಿ ನುಚ್ಚು ತೊಳೆದು (Broken Wheat) ತೊಳೆದು 4 ಗಂಟೆ ನೆನೆಸಿಡಿ.

ಬೇರೆ ಬಟ್ಟಲಿನಲ್ಲಿ ಉದ್ದಿನ ಬೇಳೆ, ಅವಲಕ್ಕಿ, ಮೆಂತ್ಯ ತೊಳೆದು 2 ಗಂಟೆ ನೆನೆಸಿಡಿ.

ಮೊದಲು ಉದ್ದಿನ ಬೇಳೆ ನುಣ್ಣಗೆ ರುಬ್ಬಿ. ನಂತರ ಗೋಧಿ ನುಚ್ಚನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಗೋಧಿ ನುಚ್ಚು ನುಣ್ಣಗಾಗಲು ಸ್ವಲ್ಪ ಸಮಯ ಬೇಕಾಗಬಹುದು.

ನಂತರ ಉಪ್ಪು ಸೇರಿಸಿ ಕಲೆಸಿ ರಾತ್ರಿ ಪೂರ ಉದುಗು ಬರಲು ಬಿಡಿ.

ಪಡ್ಡು ಮಾಡುವ ವಿಧಾನ:-

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.
ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿಡಿ.

  

ಚಿಕ್ಕ ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ, ಹೆಚ್ಚಿದ ಕರಿಬೇವು ಹಾಕಿ ಹಿಟ್ಟೀಗೆ ಸೇರಿಸಿ. ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿ ಬಿಸಿಯಾದ ಪಡ್ಡು ತವಾದಲ್ಲಿ ಹಾಕಿ ಪಡ್ಡು ಮಾಡಬಹುದು.

ದೋಸೆ

  

ಕಾದ ಕಾವಲಿಯ ಮೇಲೆ ನಿಮಗೆ ಇಷ್ಟವಾದ ರೀತಿ, ತೆಳ್ಳಗೆ ಅಥವಾ ಮೃದುವಾದ ದೋಸೆ ಹಾಗೆ ಮಾಡಬಹುದು!

ಇದೇ ಅಳತೆಯಲ್ಲಿ ಉದ್ದಿನ ಬೇಳೆ ಮಾತ್ರ ರುಬ್ಬಿ, ನೆಂದ ಗೋಧಿ ನುಚ್ಚು ರುಬ್ಬದೆ ಹಾಗೆ ಹಾಕಿ, ರುಚಿಯಾದ ಗೋಧಿ ನುಚ್ಚಿನ ಇಡ್ಲಿ ಮಾಡಬಹುದು!

ಧನ್ಯವಾದಗಳು