ಮಕ್ಕಳಿಗೆ ಬಹಳ ಇಷ್ಟವಾದ ಕುರುಕಲು ತಿಂಡಿ! ಮಕ್ಕಳಿಗೆ ಏನೂ ದೊಡ್ಡವರಿಗೂ ಇಷ್ಟವಾದದ್ದು! ಮನೆಯಲ್ಲಿ ಮಾಡುವ ಸುಲಭವಾದ ವಿಧಾನ ಇಲ್ಲಿದೆ!ನ್ಯಾಚೋಸ್

1 ಅಳತೆ ಜೋಳದ ಹಿಟ್ಟು ( Maize flour, ಅಂಗಡಿಗಳಲ್ಲಿ ಸಿಗುತ್ತದೆ, ಹಳದಿ ಬಣ್ಣದಲ್ಲಿರುತ್ತೆ! ಕಡಲೇ ಹಿಟ್ಟಿನ ಹಾಗಿರುತ್ತೆ )1/2 ಅಳತೆ ಮೈದಾ ಹಿಟ್ಟು, 1 ಚಮಚ ಆರಿಗ್ಯಾನೋ,1/4 ಚಮಚ ಓಂ ಕಾಳು ( ಅಜವಾನ), ಉಪ್ಪು, 1 ಚಮಚ ಎಣ್ಣೆ ಇಷ್ಟನ್ನು ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ.

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಕಲೆಸಿದ ಹಿಟ್ಟನ್ನು ದೊಡ್ಡ ದೊಡ್ಡ ಉಂಡೆ ಮಾಡಿ ಮೈದಾ ಹಿಟ್ಟಿನಲ್ಲಿ ಅದ್ದಿ ಆದಷ್ಟೂ ತೆಳ್ಳಗೆ ದೊಡ್ಡದಾಗಿ ಲಟ್ಟಿಸಿ, ಚಿಕ್ಕ ಚಿಕ್ಕ ತ್ರಿಕೋನಾಕಾರವಾಗಿ ಕತ್ತರಿಸಿ. ( Triangle ). ಫೋರ್ಕ್ ನ ಸಹಾಯದಿಂದ ಅಲ್ಲಲ್ಲಿ ಚುಚ್ಚಿಡಿ. ಏಕೆಂದರೆ ಪೂರಿಯ ಹಾಗೆ ಉಬ್ಬಬಾರದು. ತೆಳ್ಳಗೆ, ಗರಿ ಗರಿಯಾಗಿರಬೇಕು. ಕಡಿಮೆ ಉರಿಯಲ್ಲಿ ಕೆಂಪಗೆ ಆಗುವವರೆಗೆ ಬೇಯಿಸಿ ಹೆಚ್ಚು ಎಣ್ಣೆ ತೆಗೆಯಲು ಕಿಚನ್ ಟವೆಲ್ ಮೇಲೆ ಹಾಕಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

  

ಕರಿದ ಬಿಸಿಯಾದ ನ್ಯಾಚೋಸ್ ಮೇಲೆ ಅಂಗಡಿಗಳಲ್ಲಿ ಸಿಗುವ ಪಿರಿ ಪಿರಿ ಪೌಡರ್ ಅಥವಾ ಗಾರ್ಲಿಕ್ ಪೌಡರ್ ಉದುರಿಸಿ ಹಾಗೆ ತಿನ್ನಬಹುದು! ಸಂಜೆ ಮಕ್ಕಳಿಗೆ ಮಾಡಿ ಕೊಟ್ಟರೆ ಸಂತೋಷವಾಗಿ ತಿನ್ನುತ್ತಾರೆ!

  

ಕೆಲವು ಊರುಗಳಲ್ಲಿ Maize flour ಸಿಗುವುದಿಲ್ಲ! ಅಂತಹವರು ಹೀಗೆ ಮಾಡಿ ನೋಡಿ!

 

1/2 ಲೋಟ ಮೈದಾ, 1/2 ಲೋಟ ಚಿರೋಟಿ ರವೆ,2 ಚಮಚ ಕಡಲೇ ಹಿಟ್ಟು ( ಬೇಸನ್ ), 1 ಚಮಚ ಆರಿಗ್ಯಾನೋ, 1/4 ಚಮಚ ಅಜವಾನ, ಸ್ವಲ್ಪ ಅರಿಷಿಣ, ಉಪ್ಪು,1 ಚಮಚ ಎಣ್ಣೆ ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿ ತೆಳ್ಳಗೆ ಲಟ್ಟಿಸಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ಸವಿಯಿರಿ!

 

ಈ ನ್ಯಾಚೋಸ್ ಹಾಗೆ ತಿನ್ನಬಹುದು ಅಥವಾ ಚೀಸ್ ಡಿಪ್ ಇದ್ದರೆ ಅದರಲ್ಲಿ ಅದ್ದಿ ತಿಂದರೆ ಮತ್ತಷ್ಟು ಚೆನ್ನಾಗಿರುತ್ತದೆ.

 

ಚೀಸ್ ಡಿಪ್

 

ಚಿಕ್ಕ ಬಾಣಲೆಯಲ್ಲಿ 1 ಚಮಚ ಬೆಣ್ಣೆ ಬಿಸಿ ಮಾಡಿ. 1 ಚಮಚ ಕಾರ್ನ್ ಫ್ಲೋರ್ ಹಾಕಿ ಬಾಡಿಸಿ, 1/2 ಲೋಟ ಗಟ್ಟಿ ಹಾಲು ಅಥವಾ 4 ಚಮಚ ಫ್ರೆಶ್ ಕ್ರೀಮ್ ಹಾಕಿ ಕಲೆಸಿ, ತುರಿದ 50 ಗ್ರಾಂ ಚೀಸ್, ಚಿಟಿಕೆ ಉಪ್ಪು ( ಸ್ವಲ್ಪ ಉಪ್ಪು ಸಾಕು, ಚೀಸ್ ನಲ್ಲಿ ಸಾಕಷ್ಟು ಉಪ್ಪು ಇರುತ್ತದೆ), 1/2 ಚಮಚ ಕರಿ ಮೆಣಸಿನ ಪುಡಿ ಹಾಕಿ, ಕಡಿಮೆ ಉರಿಯಲ್ಲಿ ಚೀಸ್ ಪೂರ್ತಿಯಾಗಿ ಕರಗುವವರೆಗೆ ಕುದಿಸಿ, ಬಟ್ಟಲಿಗೆ ಹಾಕಿ ನ್ಯಾಚೋಸ್ ಜೊತೆಗೆ ಸವಿಯಿರಿ!

ಚೀಸ್ ಡಿಪ್ ಗೆ ಬೇಕಾದರೆ ಕರಿ ಮೆಣಸಿನ ಪುಡಿ ಬದಲು ಚಿಲ್ಲಿ ಫ್ಲೇಕ್ಸ್ ಬೇಕಾದರೆ ಹಾಕಿಕೊಳ್ಳಬಹುದು!

ಹಸಿರು ತಟ್ಟೆಯಲ್ಲಿರುವುದು Maize flour ನಿಂದ ಮಾಡಿರುವ ನ್ಯಾಚೋಸ್!

ಬಿಳಿ ತಟ್ಟೆಯಲ್ಲಿರುವುದು ಚಿರೋಟಿ ರವೆ, ಮೈದ ಹಾಕಿ ಮಾಡಿರುವುದು!

ಧನ್ಯವಾದಗಳು????????