ಬೆಳಿಗ್ಗಿನ ತಿಂಡಿಗೆ ಹೇಳಿ ಮಾಡಿಸಿದ ರೆಸಿಪಿ! ಹೋಟೆಲ್ ಗಳಲ್ಲಿ ಹೆಚ್ಚು ತಿನ್ನುವ ತಿಂಡಿ!ಮಾಡುವ ವಿಧಾನ:-

ದೋಸೆ ಹಿಟ್ಟಿಗೆ

ದೋಸೆ ಅಕ್ಕಿ – 3 ಲೋಟ
ಉದ್ದಿನ ಬೇಳೆ – 1 ಲೋಟ
ಗಟ್ಟಿ ಅವಲಕ್ಕಿ – 1/4 ಲೋಟ
ಕಡಲೇ ಬೇಳೆ – 1 ಚಮಚ

      

ಮೇಲಿನ ಸಾಮಗ್ರಿಗಳನ್ನು 2 ಗಂಟೆ ಕಾಲ ನೆನೆಸಿಡಿ. ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ.

ಬೆಳಿಗ್ಗೆ 1 ಚಮಚ ಅಕ್ಕಿ ಹಿಟ್ಟು, 1 ಚಮಚ ಚಿರೋಟಿ ರವೆ,1/8 ಚಮಚ ಸಕ್ಕರೆ ಹಾಕಿ ಕಲೆಸಿ.

ಕಾವಲಿ ಬಿಸಿಯಾದ ನಂತರ ಸ್ವಲ್ಪ ಎಣ್ಣೆ ಹಾಕಿ ಸವರಿ, 1 ಸೌಟು ಹಿಟ್ಟನ್ನು ಹಾಕಿ ಆದಷ್ಟೂ ತೆಳ್ಳಗೆ, ದೊಡ್ಡದಾಗಿ ಹಾಕಿ, 1 ಚಮಚ ಎಣ್ಣೆ ಅಥವಾ ತುಪ್ಪ ಹಾಕಿ. ಉರಿ ಕಡಿಮೆ ಮಾಡಿ, ದೋಸೆ ಪೂರ್ತಿಯಾಗಿ ಬೇಯಲು ಬಿಡಿ. ಈ ದೋಸೆ ಒಂದೇ ಕಡೆ ಬೇಯಿಸುವುದು. ಕಡಿಮೆ ಉರಿಯಲ್ಲಿ ದೋಸೆಯ ತಳ ಭಾಗ ಕೆಂಪಾದ ಮೇಲೆ ದೋಸೆಯನ್ನು ಒಂದು ಕಡೆಯಿಂದ ಸುತ್ತುತ್ತಾ ಬನ್ನಿ.

ಸುತ್ತಿದ ದೋಸೆ ತೆಗೆದು ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ಸವಿಯಿರಿ!

ಇದೇ ದೋಸೆಗೆ ಚಟ್ನಿ ಪುಡಿ ಸವರಿ ಮಧ್ಯದಲ್ಲಿ ಆಲೂಗೆಡ್ಡೆ ಪಲ್ಯ ಇಟ್ಟು ಸುತ್ತಿದರೆ ಪೇಪರ್ ಮಸಾಲೆ ಸಿದ್ಧ!

 

ಬೇಳೆಗಳ ಚಟ್ನಿ

ಯಾವಾಗಲೂ ಕಾಯಿ ಚಟ್ನಿ ತಿಂದು ಬೇಸರವಾಗಿದ್ದರೆ ಈ ಚಟ್ನಿ ಒಮ್ಮೆ ಮಾಡಿ ನೋಡಿ!

ಮಾಡುವ ವಿಧಾನ:-

ತಲಾ ಎರಡು ಚಮಚ ಕಡಲೇ ಬೇಳೆ, ಹೆಸರು ಬೇಳೆ, ತೊಗರಿ ಬೇಳೆ ಎಣ್ಣೆ ಹಾಕದೆ ಕೆಂಪಗೆ ಹುರಿದಿಡಿ.

2 ಎಸಳು ಕರಿಬೇವು ಸ್ವಲ್ಪ ಹುರಿದಿಡಿ.

6 ರಿಂದ 8 ಬ್ಯಾಡಗಿ ಮೆಣಸಿನಕಾಯಿ ಎಣ್ಣೆ ಹಾಕಿಹುರಿದಿಡಿ.

2 ಚಮಚ ಒಣ ಕೊಬ್ಬರಿ ತುರಿದಿಡಿ.

1 ಚಮಚ ಹುಣಿಸೆ ರಸ ತೆಗೆದಿಡಿ.

   

ಹುರಿದ ಬೇಳೆ, ಕೊಬ್ಬರಿ ತುರಿ, ಮೆಣಸಿನ ಕಾಯಿ ಪುಡಿ, ಹುಣಿಸೆ ರಸ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ತರಿ ತರಿಯಾಗಿ ರುಬ್ಬಿಡಿ.

ಕೊನೆಯಲ್ಲಿ ಒಗ್ಗರಣೆಗೆ ಸಾಸಿವೆ, ಇಂಗು ಹಾಕಿದರೆ ರುಚಿಯಾದ, ಆರೋಗ್ಯಕರವಾದ ಬೇಳೆಗಳ ಚಟ್ನಿ ಸಿದ್ಧ!

ಈ ಚಟ್ನಿ ಬಿಸಿ ಅನ್ನ,ಚಪಾತಿಯೊಂದಿಗೆ ಸಹ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು.