ನಮ್ಮ ಟೋಮೇಟೋ ಸೂಪ್ ನ ಸೋದರ ಸಂಬಂಧಿ ಅಂತಾನೆ ಹೇಳಬಹುದು! ಬೆಂಗಳೂರಿನ ಕೆಲವೇ ಹೋಟೆಲ್ ಗಳಲ್ಲಿ ಮಾಡುತ್ತಾರೆ! ಈ ಛಳಿಗಾಲಕ್ಕೆ ಹೇಳಿ ಮಾಡಿಸಿದ ರೆಸಿಪಿ ಇದು!

ಮಾಡುವ ವಿಧಾನ:-

       

4 ದೊಡ್ಡ ಆಪಲ್ ಟೋಮೇಟೋ ತೊಳೆದು ಸಣ್ಣಗೆ ಹೆಚ್ಚಿ Mixie ಯಲ್ಲಿ ನೀರು ಹಾಕದೆ ರುಬ್ಬಿ ರಸ ತೆಗೆದಿಡಿ.

1/2 ಚಮಚ ಜೀರಿಗೆ, 1/2 ಚಮಚ ಕರಿ ಮೆಣಸು ಹುರಿಯದೆ, 1/2 ಶುಂಠಿ, 6 ಎಸಳು ಬೆಳ್ಳುಳ್ಳಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ. Apple tomato ಹಾಕಬೇಕು, ನಾಟಿ ಟೋಮೇಟೋ ಹುಳಿಯಾಗಿರುತ್ತದೆ. ಚೆನ್ನಾಗಿರೋದಿಲ್ಲ ಈ ರೆಸಿಪಿಯಲ್ಲಿ!

      

ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ರುಬ್ಬಿದ ಮಿಶ್ರಣ, 1 ಪಲಾವ್ ಎಲೆ, 1/2 ಚಮಚ ಅರಿಷಿಣ ಹಾಕಿ ಸ್ವಲ್ಪ ಹಸಿ ವಾಸನೆ ಹೋಗುವವರೆಗೆ ಹುರಿದು, ಟೋಮೇಟೋ ರಸ, 1/2 ಚಮಚ ಧನಿಯ ಪುಡಿ, 1/2 ಖಾರದ ಪುಡಿ, ಉಪ್ಪು, 1/8 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ.

ನಂತರ 2 ಕಪ್ ನೀರು ಹಾಕಿ ತೆಳ್ಳಗೆ ಮಾಡಿ ಸ್ವಲ್ಪ ಸಮಯ ಕುದಿಸಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಆರೋಗ್ಯಕರವಾದ, ಸುಲಭವಾಗಿ ಮಾಡಬಹುದಾದ ಟೋಮೇಟೋ ಶೊರ್ಬಾ ಸಿದ್ಧ!

ಈ ಛಳಿಗೆ ಗಂಟಲಿಗೆ ಹಿತವಾದರುತ್ತದೆ. ಇದು ಟೋಮೇಟೋ ಸೂಪಿಗಿಂತ ಸ್ವಲ್ಪ ತೆಳ್ಳಗೆ ಇರಬೇಕು.

   

ನೀವು ಬೇಕಾದರೆ ಅನ್ನಕ್ಕೆ ಕಲೆಸಿ ಕೊಂಡು ಬೇಕಾದರೂ ತಿನ್ನಬಹುದು! ಮಕ್ಕಳಿಗೆ, ವಯಸ್ಸಾದವರು ಎಲ್ಲಲಿಗೂ ಹೇಳಿ ಮಾಡಿಸಿದ ರೆಸಿಪಿ!

ಮೆಣಸು ಮತ್ತು ಖಾರಾದ ಪುಡಿ ಎರಡೂ ಹಾಕುವುದರಿಂದ ನಿಮ್ಮ ರುಚಿಗೆ ತಕ್ಕಷ್ಟು ಖಾರಾ ಹಾಕಿಕೊಳ್ಳಿ.

ಧನ್ಯವಾದಗಳು