SCHEZWAN FRIED RICE & NOODLES ಸಿಝ್ವಾನ್ ಫ್ರೈಡ್ ರೈಸ್ ಮತ್ತು ನೂಡಲ್ಸ್
1 ಲೋಟ ಬಾಸುಮತಿ ಅಕ್ಕಿಯನ್ನು ತೆರೆದ ಬಾಣಲೆಯಲ್ಲಿ / ಕುಕ್ಕರಿನಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ.
ಕ್ಯಾರೆಟ್, ಕ್ಯಾಪ್ಸಿಕಂ, ಕ್ಯಾಬೇಜ್, ಈರುಳ್ಳಿ, ಎಳೆಯ ಬೀನ್ಸ್ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ.
8 ಬ್ಯಾಡಗಿ ಮೆಣಸಿನ ಕಾಯಿಯನ್ನು ಬಿಸಿ ನೀರಲ್ಲಿ 1/2 ಗಂಟೆ ನೆನೆಸಿಡಿ. ನಂತರ 1/2 ಇಂಚು ಸಿಪ್ಪೆ ತೆಗೆದ ಶುಂಠಿ, 5 ಬೆಳ್ಳುಳ್ಳಿ ಎಸಳು ಜೊತೆ ನುಣ್ಣಗೆ ರುಬ್ಬಿಡಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ತರಕಾರಿಗಳನ್ನು ಒಂದೊಂದಾಗಿ ಹಾಕಿ ಬಾಡಿಸಿ. ರುಬ್ಬಿದ ಮಿಶ್ರಣ ಹಾಕಿ ಸ್ವಲ್ಪ ಬಾಡಿಸಿ, ನಂತರ ತಲಾ 1 ಚಮಚ ಸೋಯಾ ಸಾಸ್, ವಿನೆಗರ್, ಟೋಮೇಟೋ ಸಾಸ್, ಸ್ವಲ್ಪ ಉಪ್ಪು ಹಾಕಿ ಫೈ ಮಾಡಿ ಕೊನೆಯಲ್ಲಿ ಬೇಯಿಸಿದ ಅನ್ನ ಹಾಕಿ ಕಲೆಸಿ ಬಿಸಿ ಮಾಡಿ ಬಡಿಸಿ.
ಇದೇ ರೆಸಿಪಿಯಲ್ಲಿ ಬಾಸುಮತಿ ಅಕ್ಕಿಯ ಬದಲು ನೂಡಲ್ಸ್ ಹಾಕಿ ಮಾಡಬಹುದು. ದೊಡ್ಡ ಬಾಣಲೆಯಲ್ಲಿ 2 ಲೀಟರ್ ನೀರು ಹಾಕಿ ಕುದಿಯಲು ಇಡಿ. ನೀರು ಕುದಿಯುವಾಗ ನೂಡಲ್ಸ್ ನೀರಿಗೆ ಹಾಕಿ ಬೇಯಲು ಬಿಡಿ 1 ಚಿಕ್ಕ ಚಮಚ ಎಣ್ಣೆ ಹಾಕಿ. ನೂಡಲ್ಸ್ ಬೆಂದ ನಂತರ ನೀರು ಸೋರಿ ಹಾಕಿಡಿ. ಮೇಲೆ ಸ್ವಲ್ಪ ತಣ್ಣನೆಯ ನೀರು ಹಾಕಿ. ನಂತರ ನೂಡಲ್ಸ್ ಅನ್ನು ಬೆಂದ ತರಕಾರಿ ಮಿಶ್ರಣಕ್ಕೆ ಹಾಕಿ, ಕಲೆಸಿ ಬಿಸಿ ಮಾಡಿ ತಿನ್ನಲು ಕೊಡಿ.
ಎರಡು ತರಹ ಮಾಡಿದರೂ ತುಂಬಾ ಚೆನ್ನಾಗಿರುತ್ತೆ. ನಿಮಗೆ ಇಷ್ಟ ಆಗುವ ಹಾಗೆ ಮಾಡಿಕೊಳ್ಳಿ.
ಧನ್ಯವಾದಗಳು.