ಮಾಡುವ ವಿಧಾನ:-
ಹಿಟ್ಟು ಮಾಡಲು
ದೋಸೆ ಅಕ್ಕಿ/ತಿಂಡಿ ಅಕ್ಕಿ – 4 ಪಾವು
ಹೆಸರು ಬೇಳೆ – 2 ಪಾವು
ಮುಚ್ಚೋರೆ ಮಾಡಲು
ಬೆಣ್ಣೆ – 2 ಚಮಚ
ಬಿಳಿ ಎಳ್ಳು – 3 ಚಮಚ
ಇಂಗು – 1 ಚಮಚ
ಜೀರಿಗೆ – 2 ಚಮಚ
ಉಪ್ಪು – ರುಚಿಗೆ
ಎಣ್ಣೆ – ಕರಿಯಲು
ಮಾಡುವ ವಿಧಾನ:-
ಅಕ್ಕಿಯನ್ನು ನಾಲ್ಕೈದು ಬಾರಿ ಚೆನ್ನಾಗಿ ತೊಳೆದು, ನೀರು ಸೋಸಿ, ನೆರಳಿನಲ್ಲಿ ಪೂರ್ತಿಯಾಗಿ ಒಣಗಿಸಿ.
ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ ಅಕ್ಕಿಯನ್ನು ಸ್ವಲ್ಪ ಸ್ವಲ್ಪವೇ ಹಾಕಿ, ಉಗುರು ಬೆಚ್ಚಗೆ ಹುರಿದಿಡಿ. ಹೆಸರು ಬೇಳೆ ಕೂಡ ಸ್ವಲ್ಪ ಸ್ವಲ್ಪವೇ ಹಾಕಿ ಘಮ್ಮೆಂದು ವಾಸನೆ ಬರುವ ಹಾಗೆ ಸ್ವಲ್ಪ ಹುರಿದಿಡಿ. ತಣ್ಣಗಾದ ಮೇಲೆ ಚೆನ್ನಾಗಿ ಕಲೆಸಿ flour mill ನಲ್ಲಿ ನುಣ್ಣಗೆ ಹಿಟ್ಟು ಮಾಡಿಸಿ, ಜರಡಿ ಹಿಡಿದಿಡಿ.
ಮುಚ್ಚೋರೆ ಮಾಡಲು ಒಂದು ದೊಡ್ಡ ತಟ್ಟೆ/ಪಾತ್ರೆಯಲ್ಲಿ 2 ಚಮಚ ತಣ್ಣಗಿರುವ ಬೆಣ್ಣೆ ಹಾಕಿ, ಕೈಯಿಂದ ಹಿಸುಕಿ, ನಂತರ 1 ಪಾವು ಹಿಟ್ಟು, 3 ಚಮಚ ಬಿಳಿ ಎಳ್ಳು, 2 ಚಮಚ ಜೀರಿಗೆ, ಇಂಗು, ಉಪ್ಪು ಹಾಕಿ ಕಲೆಸಿ, ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲೆಸಿಡಿ.
ನಂತರ ಚಕ್ಕುಲಿ ಒರಳಿನಲ್ಲಿ, ಮುಚ್ಚೋರೆ ಬಿಲ್ಲೆ ಹಾಕಿ (ಚಕ್ಕುಲಿಯ ಹಾಗೇ ಆದರೆ ಮೂರು ರಂಧ್ರಗಳಿರುತ್ತೆ,)ಮುಚ್ಚೋರೆ ಒತ್ತಿ. ಚಕ್ಕುಲಿ ಹಾಗೆ ಗುಂಡಗೆ ಅಲ್ಲ, ಸ್ವಲ್ಪ ಒಂದರ ಮೇಲೆ ಒಂದು ಬರುವ ಹಾಗೆ, ತಟ್ಟೆ/thick plastic sheet ಮೇಲೆ ಒತ್ತಿ. ತುದಿಯನ್ನು ಸ್ವಲ್ಪ ಒತ್ತಿ ಅಂಟಿಸಿ, ಎಣ್ಣೆ ಕಾದ ಮೇಲೆ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಆಗುವ ಹಾಗೆ ಕರಿಯಿರಿ. ಕಡಿಮೆ ಉರಿಯಲ್ಲಿ ಕರಿದರೆ ವಾರವಾದರೂ ಗರಿಯಾಗಿ ಇರುತ್ತೆ. ಎಲ್ಲಾ ಕರಿದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ, ಬೇಕಾದಾಗ ತಿನ್ನಬಹುದು. ಈ ರೆಸಿಪಿಯಲ್ಲೂ ಕೂಡ ಖಾರಾ ಹಾಕೋಲ್ಲ! ನಿಮಗೆ ಬೇಕಾದರೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ.
ಧನ್ಯವಾದಗಳು.
Leave A Comment