ಬೆಂಡೆ ಕಾಯಿ ತನ್ನಲ್ಲಿ ತುಂಬಾ ಒಳ್ಳೆಯ ಅಂಶಗಳನ್ನು ತುಂಬಿಕೊಂಡಿದೆ. ಮಕ್ಕಳು ಇದನ್ನು ಹೆಚ್ಚು ತಿಂದಷ್ಟು, ಅವರ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇಂತಹ ಬೆಂಡೇ ಕಾಯಿಯ ರುಚಿಯಾದ, ಸುಲಭವಾದ ಒಂದು ರೆಸಿಪಿ ಇಲ್ಲಿದೆ.

ಮಾಡುವ ವಿಧಾನ :-

   

ಎಳೆಯದಾದ ಬೆಂಡೆ ಕಾಯಿಗಳನ್ನು ತೊಳೆದು, ಒರೆಸಿ, 1 ಇಂಚು ಉದ್ದದ ತುಂಡುಗಳನ್ನಾಗಿ ಹೆಚ್ಚಿ, ಕಾದ ಎಣ್ಣೆಯಲ್ಲಿ ಸ್ವಲ್ಪ ಕರಿದು ತೆಗೆದಿಡಿ. ತುಂಬಾ ಕೆಂಪಗೆ ಮಾಡಬೇಡಿ.

200 ಮಿ ಲೀಟರ್ ನಷ್ಟು ತಾಜಾ ಮೊಸರಿಗೆ ( Fresh curds) 2 ಚಮಚ ಕಾಶ್ಮೀರಿ ಚಿಲ್ಲಿ ಪುಡಿ (ಸಿಗದಿದ್ದರೆ ಅಚ್ಛ ಖಾರಾ ಪುಡಿ ಹಾಕಿ, ಕಾಶ್ಮೀರಿ ಚಿಲ್ಲಿ ಪುಡಿ ಕೆಂಪು ಬಣ್ಣ ಜಾಸ್ತಿ ಇರುತ್ತೆ), 1 ಚಮಚ ಧನಿಯಾ ಪುಡಿ, 1 ಚಮಚ ಶುಂಠಿ ಪುಡಿ, 1/4 ಚಮಚ ಏಲಕ್ಕಿ ಪುಡಿ, 1/8 ಚಮಚ ಅರಿಶಿಣ ಪುಡಿ, ಉಪ್ಪು ಹಾಕಿ ಕಲೆಸಿಡಿ.

   

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, 1 ಇಂಚು ಚಕ್ಕೆ, 4 ಲವಂಗ, 1 ಏಲಕ್ಕಿ ಹಾಕಿ, ನಂತರ ಮೊಸರು ಹಾಕಿ Medium flame ನಲ್ಲಿ 3 ರಿಂದ 4 ನಿಮಿಷ ಕುದಿಸಿ. ನಂತರ ಹುರಿದ ಬೆಂಡೆ ಕಾಯಿ, 1/2 ಚಮಚ ಜೀರಿಗೆ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಕುದಿಸಿ ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿ ಚಪಾತಿ ಜೊತೆ ಬಡಿಸಿ.

   

ಹೆಚ್ಚು ಮಸಾಲ ಇಲ್ಲ, ರುಬ್ಬುವ ಕೆಲಸ ಇಲ್ಲ, ತುಂಬಾ ಚೆನ್ನಾಗಿರುತ್ತೆ. ಮೊಸರು ಕುದಿಸಿದಾಗ ಅದರಲ್ಲಿರುವ ಎಣ್ಣೆ ಅಂಶ ಮೇಲೆ ತೇಲುತ್ತೆ! ಫೋಟೋದಲ್ಲಿ ಕಾಣ್ತಾ ಇರೋದು ಮೊಸರಿನ ತುಪ್ಪದ ಅಂಶ! ಮಕ್ಕಳಿಗೆ ತುಂಬಾ ಒಳ್ಳೆಯದು!

ಇದೇ ರೆಸಿಪಿ ಬೇಬಿ ಆಲೂಗೆಡ್ಡೆ ಹಾಕಿ ಕೂಡಾ ಮಾಡಬಹುದು. ಆಲೂಗೆಡ್ಡೆ ತೊಳೆದು ಸ್ವಲ್ಪ ಉಪ್ಪು ಹಾಕಿ, ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿ, ಸಿಪ್ಪೆ ತೆಗೆದು, ಎಣ್ಣೆಯಲ್ಲಿ deep fry ಮಾಡಿ ಹಾಕಬೇಕು. ಮಕ್ಕಳಿಗೆ ತುಂಬಾ ಇಷ್ಟ ಆಗುತ್ತೆ!

ಧನ್ಯವಾದಗಳು.