ಬಾದಾಮ್ ಸೂಪ್ ಮಾಡುವ ವಿಧಾನ:-
2 ಹಿಡಿಯಷ್ಟು ಬಾದಾಮಿಯನ್ನು ಬಿಸಿ ನೀರಲ್ಲಿ ನೆನೆಸಿ ಸಿಪ್ಪೆ ತೆಗೆದಿಡಿ. ಸ್ವಲ್ಪ ನೀರು ಹಾಕಿ ಆದಷ್ಟೂ ನುಣ್ಣಗೆ ರುಬ್ಬಿ.
ಬಾಣಲೆಯಲ್ಲಿ 1 ಚಮಚ ಬೆಣ್ಣೆ ಹಾಕಿ, ಕರಗಿದ ಮೇಲೆ 1 ಚಮಚ ಮೈದಾ/ ಕಾರ್ನ್ ಫ್ಲೋರ್ ಹಾಕಿ ಸ್ವಲ್ಪ ಹುರಿದು, 100 ಮಿ ಲೀಟರ್ ಹಾಲು ಹಾಕಿ ಸ್ವಲ್ಪ ಕುದಿಸಿ. ನಂತರ ರುಬ್ಬಿದ ಬಾದಾಮಿ ಮಿಶ್ರಣ ಹಾಕಿ ಸ್ವಲ್ಪ ನೀರು, ಉಪ್ಪು ಹಾಕಿ ಕುದಿಸಿ. ಕೊನೆಯಲ್ಲಿ 1/2 ಚಮಚ ಪೆಪ್ಪರ್ ಪೌಡರ್, Fresh cream 1 ಚಮಚ ಹಾಕಿ ಕಲೆಸಿ, ಯಾವುದಾದರೂ ಸುಟ್ಟ ಹಪ್ಪಳದೊಡನೆ ಕುಡಿಯಲು ಕೊಡಿ.
ಈ ಆರೋಗ್ಯಕರ ಸೂಪನ್ನು ಪುಟ್ಟ ಮಕ್ಕಳಿಗೆ ಸಹ ಕೊಡಬಹುದು! Fresh cream ಇಲ್ಲದಿದ್ದರೆ ಮನೆಯಲ್ಲಿರುವ ಹಾಲಿನ ಕೆನೆ ಹಾಕಬಹುದು. ತುಂಬಾ ರುಚಿಯಾಗಿರುತ್ತೆ! ಇಷ್ಟು ಪ್ರಮಾಣದಲ್ಲಿ ಮಾಡಿದ ಸೂಪ್ 4 ಜನರಿಗೆ ಸಾಕಾಗುತ್ತೆ, ಪೆಪ್ಪರ್ ಪೌಡರ್ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿಕೊಳ್ಳಿ.
ಬಾದಾಮಿ ಚಟ್ನಿ
ಮಕ್ಕಳಿಗೆ ಹಸಿ ಬಾದಾಮಿ ತಿನ್ನಲು ಕೊಟ್ಟರೆ ಅವರು ತಿನ್ನಲು ಇಷ್ಟ ಪಡುವುದಿಲ್ಲ! ಅದರ ಚಟ್ನಿ ಮಾಡಿ ಕೊಡಿ. ಖಂಡಿತಾ ಇಷ್ಟ ಪಟ್ಟು ತಿನ್ನುತ್ತಾರೆ!
ಮಾಡುವ ವಿಧಾನ :-
1 ಹಿಡಿ ಬಾದಾಮಿ ಸಿಪ್ಪೆ ತೆಗೆದಿಡಿ. 2 ಹಸಿ ಮೆಣಸಿನ ಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ. ( ಚಟ್ನಿ ಮಾಡುವಾಗ ಮೆಣಸಿನ ಕಾಯಿ ಹುರಿದು ಹಾಕಿದರೆ ಗ್ಯಾಸ್ ಆಗೋಲ್ಲ, ಸ್ವಲ್ಪ ಸೀಳಿ ಹಾಕಿ, ಇಲ್ಲದಿದ್ದರೆ ಅದು ಸಿಡಿಯುತ್ತೆ) ಸ್ವಲ್ಪ ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಕೊನೆಯಲ್ಲಿ ನಿಂಬೆ ರಸ ಸೇರಿಸಿ ಕಲೆಸಿ. ಒಗ್ಗರಣೆಗೆ ಸಾಸಿವೆ ಕರಿಬೇವು ಹಾಕಿದರೆ ರುಚಿಯಾದ ಬಾದಾಮಿ ಚಟ್ನಿ ರೆಡಿ!
ಚಟ್ನಿಯ ರುಚಿಗೆ ನಿಮ್ಮ ಮಕ್ಕಳು ದೋಸೆ ಅಥವಾ ಇಡ್ಲಿ ಹೆಚ್ಚು ತಿಂದರೆ ಆಶ್ಚರ್ಯ ಪಡಬೇಡಿ! ಅಥವಾ ದೋಸೆ, ಇಡ್ಲಿ ತಿನ್ನದ ಕೇವಲ ಚಟ್ನಿ ಮಾತ್ರ ತಿಂದರೂ ಆಶ್ಚರ್ಯವೇನಿಲ್ಲ! ಅಷ್ಟು ರುಚಿಯಾಗಿರುತ್ತೆ!
ಬಾದಾಮಿ ಸ್ವಲ್ಪ ಬೆಲೆ ಹೆಚ್ಚು! ಆದರೆ ಆರೋಗ್ಯಕ್ಕೆ ಒಳ್ಳೆಯದು! ಹಾಗಾಗಿ ನಾವು ಆಗಾಗ ಉಪಯೋಗಿಸಬಹುದು!
ಧನ್ಯವಾದಗಳು.
Leave A Comment