ಬೆಳಗ್ಗಿನ ತಿಂಡಿಗೆ ತುಂಬಾ ಮನೆಗಳಲ್ಲಿ ಪೂರಿ ಮಾಡುತ್ತಾರೆ. ಪೂರಿ ಜನಪ್ರಿಯ ತಿನಿಸು ಕೂಡ ಹೌದು!!! ಇದೇ ಪೂರಿಯ ಇನ್ನೊಂದು ರೂಪ ಟೊಮೇಟೋ ಪೂರಿ. ಸಾಧಾರಣ ಪೂರಿಗಿಂತ ಸ್ವಲ್ಪ ರುಚಿ, ಬಣ್ಣ ಬೇರೆ!!! ಆಹಾರದಲ್ಲಿ ವೈವಿಧ್ಯತೆ ಬಯಸುವವರಿಗೆ ಈ ರೆಸಿಪಿ ಖಂಡಿತಾ ಇಷ್ಟ ಆಗುತ್ತೆ!!!

ಮಾಡುವ ವಿಧಾನ:-

   

4 ಟೊಮೇಟೋ ತೊಳೆದು ದೊಡ್ಡದಾಗಿ ಹೆಚ್ಚಿ ನೀರು ಹಾಕದೆ ರುಬ್ಬಿ ರಸ ಶೋಧಿಸಿ ಇಡಿ. 1 ಅಳತೆ ಗೋಧಿ ಹಿಟ್ಟು, 1 ಅಳತೆ ಚಿರೋಟಿ ರವೆ, 1 ಸಣ್ಣಗೆ ಹೆಚ್ಚಿದ ಈರುಳ್ಳಿ, ಖಾರಾ ಪುಡಿ 1 ಚಮಚ, ಹಸಿ ಮೆಣಸಿನ ಕಾಯಿ ಪೇಸ್ಟ್ 1/2 ಚಮಚ, ಉಪ್ಪು, ಕಾದ ಎಣ್ಣೆ 1 ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು 4 ಚಮಚ ಸೇರಿಸಿ ಚೆನ್ನಾಗಿ ಕಲೆಸಿ, ಟೊಮೇಟೋ ರಸ ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ಗಟ್ಟಿಯಾಗಿ ಕಲೆಸಿಡಿ.

   

ಒಟ್ಟಿಗೆ ಎಲ್ಲಾ ರಸ ಸುರಿಯಬೇಡಿ. 15 ನಿಮಿಷದ ನಂತರ, ಚಿಕ್ಕ ಚಿಕ್ಕ ಉಂಡೆ ಮಾಡಿ, ತೆಳ್ಳಗೆ ಪೂರಿ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿಯಿರಿ.

   

ಹೆಚ್ಚಿನ ಎಣ್ಣೆ ಹೋಗಲು ಪೇಪರ್ ಟವಲ್ ಮೇಲೆ ಹಾಕಿ, ನಿಮಗೆ ಇಷ್ಟವಾದ side dish ಜೊತೆ ಬಡಿಸಿ. ಈ ಪೂರಿ ಸಾಧಾರಣ ಪೂರಿಯ ಹಾಗೆ ಉಬ್ಬುವುದಿಲ್ಲ. ಮತ್ತಷ್ಟು spicy ಬೇಕಾದರೆ ಗರಂ ಮಸಾಲ, ಚಾಟ್ ಮಸಾಲ, ಜೀರಿಗೆ ಪುಡಿ, ಆಮ್ ಚೂರ್ ಪುಡಿ ಬೇಕಾದರೆ ಸೇರಿಸಿ ಮಾಡ ಬಹುದು. ಈ ಪೂರಿಯನ್ನು ಯಾವುದೇ side dish ಇಲ್ಲದೆ ಹಾಗೆ ಬೇಕಾದರೆ ತಿನ್ನಬಹುದು! ತುಂಬಾ ರುಚಿಯಾಗಿರುತ್ತೆ.

ಟೊಮೇಟೋ ರಸ ಹಾಕುವುದರಿಂದ ಈ ಪೂರಿಗೆ ಸ್ವಲ್ಪ ಉಪ್ಪು, ಖಾರಾ ಹೆಚ್ಚು ಬೇಕಾಗುತ್ತೆ.

ಧನ್ಯವಾದಗಳು.