ಪಡ್ಡು ಎಲ್ಲರೂ ಇಷ್ಟ ಪಟ್ಟು ತಿನ್ನುವ ತಿನಿಸು! ಅದನ್ನು ಇನ್ನೂ ಇಷ್ಟ ಪಟ್ಟು ತಿನ್ನುವ ಹಾಗೆ ಮಾಡುವ ರೆಸಿಪಿ ಇಲ್ಲಿದೆ!

ಖಾರಾ ಸ್ಟಫ್ಡ್ ಪಡ್ಡು ಮಾಡುವ ವಿಧಾನ:-

      

2 ಈರುಳ್ಳಿ, 2 ಟೊಮೇಟೋ ಸಣ್ಣಗೆ ಹೆಚ್ಚಿಡಿ. 1/2 ಲೋಟ ಬಟಾಣಿ ಬೇಯಿಸಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಟೊಮೇಟೋ ಹಾಕಿ ಬಾಡಿಸಿ, ತಲಾ 1/2 ಚಮಚ ಗರಂ ಮಸಾಲ, ಧನಿಯ ಪುಡಿ, ಜೀರಾ ಪುಡಿ, 1 ಚಮಚ ಖಾರಾ ಪುಡಿ, ಉಪ್ಪು, ಬೇಯಿಸಿದ ಬಟಾಣಿ ಹಾಕಿ ಸ್ವಲ್ಪ ಬಾಡಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ತೆಗೆದಿಡಿ.

      

ಪಡ್ಡು ತವಾ ಬಿಸಿ ಮಾಡಲು ಇಟ್ಟು, ಸ್ವಲ್ಪ ಎಣ್ಣೆ ಹಾಕಿ, ಪಡ್ಡು ಮಾಡುವ ಹಳ್ಳದಲ್ಲಿ 1/2 ಭಾಗದಷ್ಟು ದೋಸೆ ಹಿಟ್ಟು ಹಾಕಿ, ಉರಿ ಕಡಿಮೆ ಮಾಡಿ, ಸ್ಟಫಿಂಗ್ ಮಾಡಲು ಇಟ್ಟಿರುವ ಈರುಳ್ಳಿ ಮಿಶ್ರಣ ಚಮಚದಲ್ಲಿ ಸ್ವಲ್ಪ ಹಾಕಿ( ಚಿತ್ರ ನೋಡಿ) ಅದರ ಮೇಲೆ ಮತ್ತೆ ದೋಸೆ ಹಿಟ್ಟು ಸ್ವಲ್ಪ ಹಾಕಿ, ಮೇಲೆ ಎಣ್ಣೆ ಹಾಕಿ, medium flame ನಲ್ಲಿ ಎರಡೂ ಕಡೆ ಗರಿ ಗರಿಯಾಗಿ ಬೇಯಿಸಿ ಚಟ್ನಿ ಜೊತೆ ಬಡಿಸಿ.

ನಿಮಗೆ ಇಷ್ಟವಾದ ಯಾವುದೇ ಖಾರಾ stuffing ಬೇಕಾದರೂ ಹಾಕಬಹುದು. ಆಲೂಗೆಡ್ಡೆ ಪಲ್ಯ ಬೇಕಾದರೂ ಹಾಕಬಹುದು. ಚೆನ್ನಾಗಿರುತ್ತೆ.

 

ಚಟ್ನಿ :-

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, 4 ಚಮಚ ಕಡಲೇ ಬೇಳೆ, 1 ಹೆಚ್ಚಿದ ಈರುಳ್ಳಿ, 8 ಬ್ಯಾಡಗಿ ಮೆಣಸಿನ ಕಾಯಿ ಹಾಕಿ ಹುರಿದು, ತಣ್ಣಗಾದ ಮೇಲೆ, 4 ಚಮಚ ಕಾಯಿ ತುರಿ, ಹುಣಿಸೆ ರಸ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿ. ಈ ರೆಸಿಪಿ ಹಿಂದೆ ಹಾಕಿದ್ದೆ.

 

ಸ್ವೀಟ್ ಪಡ್ಡು ಮಾಡುವ ವಿಧಾನ:

ಕುಕಿಂಗ್ ಚೀಸ್ ತುರಿದಿಡಿ. ಚಾಕೊಲೇಟ್ ಸಾಸ್ ತೆಗೆದಿಡಿ.

   

ಪಡ್ಡು ತವಾ ಬಿಸಿಯಾದ ಮೇಲೆ, ಸ್ವಲ್ಪ ಎಣ್ಣೆ ಹಾಕಿ, ಪಡ್ಡು ಮಾಡುವ ಹಳ್ಳದಲ್ಲಿ 1/2 ದೋಸೆ ಹಿಟ್ಟು ಹಾಕಿ, ಉರಿ ಕಡಿಮೆ ಮಾಡಿ, ಚಮಚದಿಂದ ಚಾಕೊಲೇಟ್ ಸಾಸ್ ಹಾಕಿ, ಅದರ ಮೇಲೆ ತುರಿದ ಚೀಸ್ ಹಾಕಿ ಮತ್ತೆ ಸ್ವಲ್ಪ ದೋಸೆ ಹಿಟ್ಟು ಹಾಕಿ, ಎಣ್ಣೆ ಹಾಕಿ medium flame ನಲ್ಲಿ ಎರಡೂ ಕಡೆ ಗರಿ ಗರಿಯಾಗಿ ಬೇಯಿಸಿ, ಮುದ್ದು ಮಕ್ಕಳಿಗೆ ತಿನ್ನಲು ಕೊಡಿ. ಮಕ್ಕಳಿಗೆ ತುಂಬಾ ಇಷ್ಟ ಆಗುತ್ತೆ.

ಬೇಕಾದರೆ ಕಾಯಿ ತುರಿ, ಬೆಲ್ಲ, dry fruits ಹಾಕಿ, ಸಿಹಿ ಮಿಶ್ರಣ ಮಾಡಿ ಕೂಡ ಮಾಡಬಹುದು! Mixed fruit jam/ನಿಮಗೆ ಇಷ್ಟ ಆಗುವ ಯಾವುದೇ ಸಿಹಿ stuffing ಮಾಡಿ ತಿಂದು ನೋಡಿ.

ಧನ್ಯವಾದಗಳು.