SINDHI BENDI MASALE ಸಿಂಧಿ ಬೆಂಡಿ ಮಸಾಲೆ
ಮಾಡುವ ವಿಧಾನ:-
ಗಟ್ಟಿಯಾದ 1 ಬಟ್ಟಲು ಸಿಹಿ (fresh)ಮೊಸರಿಗೆ, ತಲಾ 1 ಚಮಚ ಗರಂ ಮಸಾಲ, ಚಾಟ್ ಮಸಾಲ, ಖಾರಾ ಪುಡಿ, ಉಪ್ಪು, ಆಮ್ ಚೂರ್, 1/2 ಚಮಚ ಧನಿಯ ಪುಡಿ, ಜೀರಾ ಪುಡಿ, (ಸಣ್ಣದಾಗಿ ಹೆಚ್ಚಿದ ಈರುಳ್ಳಿ ಬೇಕಾದಲ್ಲಿ) ಹಾಕಿ ಕಲೆಸಿಡಿ. ಎಳೆಯದಾದ ಬೆಂಡೆ ಕಾಯಿ ಆಯ್ಕೆ ಮಾಡಿ, ತೊಳೆದು ಒರೆಸಿ, ತೊಟ್ಟು ತೆಗೆದು, ಮಧ್ಯದಲ್ಲಿ ಸೀಳಿ,(ಚಿತ್ರ ನೋಡಿ) ಮೊಸರಿನ ಮಿಶ್ರಣವನ್ನು ತುಂಬಿಡಿ. ಚಿಕ್ಕ ಬೆಂಡೆ ಕಾಯಿ ಆದರೆ ಹಾಗೆ ಉದ್ದಕ್ಕೆ ಹಾಕಿ, ದೊಡ್ಡದಾಗಿದ್ದರೆ, 2 ಇಂಚು ಅಳತೆಗೆ ತುಂಡು ಮಾಡಿ, ಮಧ್ಯದಲ್ಲಿ ಸೀಳಿ ಮೊಸರು ಮಿಶ್ರಣ ತುಂಬಿಸಿ.
ಆದಷ್ಟೂ ಎಳೆಯ ಬೆಂಡೆ ಕಾಯಿಯನ್ನು ಆಯ್ದುಕೊಳ್ಳಿ. ಬಾಣಲೆಯಲ್ಲಿ 6 ಚಮಚ ಎಣ್ಣೆ ಹಾಕಿ, ತುಂಬಿದ ಬೆಂಡೆ ಕಾಯಿಯನ್ನು ಎಚ್ಚರಿಕೆಯಿಂದ ಹಾಕಿ ಮೊಸರು ಮಿಶ್ರಣ ಉಳಿದಿದ್ದರೆ ಅದನ್ನು ಮೇಲೆ ಹಾಕಿ, ತಟ್ಟೆ ಮುಚ್ಚಿ 5 ನಿಮಿಷ ಬೇಯಿಸಿ, ಮಧ್ಯದಲ್ಲಿ ಆಗಾಗ ಮೆದುವಾಗಿ ಕಲೆಸಿ, ಸಣ್ಣ ಉರಿಯಲ್ಲಿ ಬೆಂಡೆ ಕಾಯಿ ಮೆತ್ತಗೆ ಆಗುವವರೆಗೂ ಬೇಯಿಸಿ, ಚಪಾತಿ ಜೊತೆ ಬಡಿಸಿ. ಸುಲಭವಾಗಿ ಮಾಡಬಹುದು, ಮಾಡಿ ನೋಡಿ, ರುಚಿ rich ಆಗಿ, ಅಧ್ಬುತವಾಗಿರುತ್ತದೆ.
ಧನ್ಯವಾದಗಳು.