ಉತ್ತರ ಭಾರತದ ಬಹು ಜನಪ್ರಿಯ ಪಾಯಸ( ಖೀರ್)! ಮಾಡುವುದು ತುಂಬಾ ಸುಲಭ! ಅವರು ಹಬ್ಬಗಳಲ್ಲಿ ತಪ್ಪದೆ ಮಾಡುತ್ತಾರೆ! ಹಾಗಾದರೆ ಸಿಹಿ ಪಾಯಸದ ರೆಸಿಪಿ ನೋಡೋಣವೇ?

ರೈಸ್ ಫಿರ್ನಿ ಮಾಡುವ ವಿಧಾನ:-

   

4 ಚಮಚ ಬಾಸುಮತಿ ಅಕ್ಕಿಯನ್ನು ತೊಳೆದು 1/2 ಗಂಟೆ ನೆನೆಸಿಡಿ. ನಂತರ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ.

2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕುಂಕುಮ ಕೇಸರಿ ನೆನೆಸಿಡಿ.

       

ದಪ್ಪ ತಳದ ಬಾಣಲೆಯಲ್ಲಿ 1/2 ಲೀಟರ್ ಗಟ್ಟಿ ಹಾಲು ಕುದಿಯಲು ಇಡಿ. ಹಾಲು ಕುದಿಸಿ 1/2 ದಷ್ಟು ಆದಾಗ ರುಬ್ಬಿದ ಅಕ್ಕಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ. ಅಕ್ಕಿ ರುಬ್ಬಿರುವುದರಿಂದ ಬೇಗನೆ ಬೇಯುತ್ತದೆ. ಅಕ್ಕಿ ಪೂರ್ತಿ ಬೆಂದ ಮೇಲೆ 4 ಚಮಚ ಸಕ್ಕರೆ ಹಾಕಿ ಹಡಿಮೆ ಉರಿಯಲ್ಲಿ ಕುದಿಸಿ. ಪಾಯಸಕ್ಕೆ ಚಿಟಿಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ, ದ್ರಾಕ್ಷಿ ಹಾಕಿ ಕಲೆಸಿ ತಣ್ಣಗಾದ ಮೇಲೆ Fridge ನಲ್ಲಿ 1 ಗಂಟೆ ಕಾಲ ಇಟ್ಟು ನಂತರ ತಿನ್ನಲು ಕೊಡಿ.

ಈ ಪಾಯಸವನ್ನು ಬಿಸಿಯಾಗಿ ಬೇಕಾದರೂ ತಿನ್ನಬಹುದು! ತಣ್ಣಗಾದ ಮೇಲೆ ಬೇಕಾದರೂ ತಿನ್ನಬಹುದು. ಬಡಿಸುವಾಗ ಪುಟ್ಟ ಪುಟ್ಟ ಮಣ್ಣಿನ ಕುಡಿಕೆಗಳಲ್ಲಿ ಕೊಟ್ಟರೆ ತುಂಬಾ ಚೆನ್ನಾಗಿರುತ್ತೆ.

    

ಈ ಪಾಯಸಕ್ಕೆ ಸಕ್ಕರೆ ಸೇರಿಸುವ ಮೊದಲು ಸ್ವಲ್ಪ ತೆಗೆದಿಟ್ಟು, Sugar Free (Sugar Substitute) tablets ಹಾಕಿ ಕೊಟ್ಟರೆ ಮನೆಯಲ್ಲಿರುವ ಮಧುಮೇಹಿಗಳು ಕೂಡಾ ಈ ರೈಸ್ ಫಿರ್ನಿಯ ರುಚಿ ನೋಡಬಹುದು!

ಧನ್ಯವಾದಗಳು.