MOSARU AKKI THARI UPPITTU ಮೊಸರು ಅಕ್ಕಿ ತರಿ ಉಪ್ಪಿಟ್ಟು
ಮೊಸರು ಅಕ್ಕಿ ತರಿ ಉಪ್ಪಿಟ್ಟು ಮಾಡುವ ವಿಧಾನ:-
1 ಲೋಟ ಅಕ್ಕಿ ತರಿಗೆ ಸ್ವಲ್ಪ ಉಪ್ಪು, ಹುಳಿ ಮೊಸರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿಡಿ. ರವೆ ಹುರಿಯುವ ಅಗತ್ಯವಿಲ್ಲ. ರಾತ್ರಿ ಕಲೆಸಿ, ಬೆಳಗ್ಗೆ ಇಡ್ಲಿಯಂತೆ 10 ರಿಂದ 12 ನಿಮಿಷ ಹಬೆಯಲ್ಲಿ ಬೇಯಿಸಿ. ಸ್ವಲ್ಪ ತಣ್ಣಗಾದ ಮೇಲೆ, ಪುಡಿ ಮಾಡಿ ಇಡಿ.
ಬಾಣಲೆಯಲ್ಲಿ ಒಗ್ಗರಣೆಗೆ, 4 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಚಿಟಿಕೆ ಅರಿಶಿಣ, ಕರಿಬೇವು, 2 ಸಣ್ಣಗೆ ಹೆಚ್ಚಿದ ಈರುಳ್ಳಿ, ಹೆಚ್ಚಿದ 8 ರಿಂದ 10 ಹಸಿ ಮೆಣಸಿನ ಕಾಯಿ (ಖಾರಾ ತುಸು ಹೆಚ್ಚು ಬೇಕು), ಸ್ವಲ್ಪ ಉಪ್ಪು (ಸ್ವಲ್ಪವೇ ಸಾಕು, ಹಿಟ್ಟಿಗೆ ಕೂಡ ಹಾಕಿದ್ದೇವೆ) ಹಾಕಿ, ನಂತರ ಪುಡಿ ಮಾಡಿದ ಅಕ್ಕಿ ತರಿ ಹಾಕಿ, ಸಣ್ಣ ಉರಿಯಲ್ಲಿ ಸ್ವಲ್ಪ ಬೇಯಿಸಿ, ಕೊನೆಯಲ್ಲಿ ಕಾಯಿ ತುರಿ, ಕೊತ್ತಂಬರಿ ಸೊಪ್ಪು, (ನಿಂಬೆ ರಸ ಬೇಕಾದರೆ) ಹಾಕಿ, ಚಟ್ನಿ, ಮೊಸರು ಜೊತೆ ಬಡಿಸಿ. ನಿಮಗೆ ಉಪ್ಪಿಟ್ಟು ಮೆತ್ತಗೆ ಬೇಕೆಂದರೆ ಒಗ್ಗರಣೆ ಹಾಕುವಾಗ ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ. ಮೊಸರು ಹಾಕಿರುವುದರಿಂದ ಸ್ವಲ್ಪ ರುಚಿ ವಿಭಿನ್ನವಾಗಿರುತ್ತೆ! ಒಮ್ಮೆ ಮಾಡಿ ನೋಡಿ.
ಧನ್ಯವಾದಗಳು.