MIX DAL PAKODA ಮಿಕ್ಸ್ ದಾಲ್ ಪಕೋಡ
Indu Jayaram
SHARE
ನಾವು ಸಾಧಾರಣವಾಗಿ ಪಕೋಡ ಅಥವಾ ವಡೆ ಮಾಡುವಾಗ ಯಾವುದಾದರೂ ಒಂದು ಹಿಟ್ಟು ಅಥವಾ ಒಂದು ಬೇಳೆ ಹಾಕಿ ಮಾಡುತ್ತೇವೆ. ಒಂದೊಂದು ಬೇಳೆಯೂ ತನ್ನದೇ ಆದ ರುಚಿ, ಗುಣ ಹೊಂದಿರುತ್ತದೆ. 4 ಬೇಳೆಗಳನ್ನು ಸೇರಿಸಿ ಮಾಡುವ ವಿಧಾನ ಇಲ್ಲಿದೆ.
ಮಿಕ್ಸ್ ದಾಲ್ ಪಕೋಡ ಮಾಡುವ ವಿಧಾನ:-
ತಲಾ 1/4 ಲೋಟ ಕಡಲೇ ಬೇಳೆ, ಹೆಸರು ಬೇಳೆ, ತೊಗರಿ ಬೇಳೆ, ಉದ್ದಿನ ಬೇಳೆಗಳನ್ನು ತೊಳೆದು 2 ಘಂಟೆ ನೆನೆಸಿಡಿ. ನೀರು ತೆಗೆದು, ತರಿ ತರಿಯಾಗಿ ವಡೆಗೆ ರುಬ್ಬುವಂತೆ ರುಬ್ಬಿಡಿ.
ನಂತರ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನ ಕಾಯಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಪುದೀನ, ಸಬ್ಬಾಕ್ಷಿ ಸೊಪ್ಪು, 1 ಇಂಚು ತುರಿದ ಶುಂಠಿ, ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ, ಚಿಕ್ಕ ಚಿಕ್ಕ ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿಯಿರಿ. ಎಲ್ಲಾ ಬೇಳೆ ಇರುವುದರಿಂದ ರುಚಿ ತುಂಬಾ ಚೆನ್ನಾಗಿರುತ್ತದೆ, ಹೆಸರು ಬೇಳೆ, ಉದ್ದಿನ ಬೇಳೆ ಗರಿ ಗರಿಯಾಗಿ ಇರುತ್ತೆ, ಸಾಕಷ್ಟು ಸೊಪ್ಪು ಹಾಕಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
ಹೆಚ್ಚು ಸೊಪ್ಪು ಹಾಕಿದಷ್ಟೂ ರುಚಿ ಹೆಚ್ಚು, ಮಾಡಿ ನೋಡಿ.
ಧನ್ಯವಾದಗಳು