MATODI KADUBU ಮಾಟೋಡಿ ಕಡುಬು
ಮಾಡುವ ವಿಧಾನ:-
1 ಲೋಟ ಕಡಲೇ ಬೇಳೆಯನ್ನು ತೊಳೆದು 2 ಘಂಟೆ ನೆನೆಸಿ, ಸೋಸಿ ಕೊಂಡು, 1/2 ಲೋಟ ಕಾಯಿ ತುರಿ, 6 ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ, ವಡೆಯಂತೆ ತರಿ ತರಿಯಾಗಿ ರುಬ್ಬಿ ಕೊಳ್ಳಿ.
1/2 ಲೋಟ ಹಸಿ ಬಟಾಣಿ ಬೇಯಿಸಿ ಇಡಿ
4 ಕಟ್ಟು ಮೆಂತ್ಯ ಸೊಪ್ಪು ತೊಳೆದು, ಸಣ್ಣ ಗೆ ಹೆಚ್ಚಿಡಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಇಂಗು, ಹೆಚ್ಚಿದ ಮೆಂತ್ಯ ಸೊಪ್ಪು ಹಾಕಿ ಹುರಿದು, ರುಬ್ಬಿದ ಮಿಶ್ರಣ, ಬಟಾಣಿ, ಉಪ್ಪು ಹಾಕಿ ಸ್ವಲ್ಪ ಬಾಡಿಸಿ ತಣ್ಣಗಾಗಲು ಬಿಡಿ.
1 ಲೋಟ ಚಿರೋಟಿ ರವೆ, 1/2 ಲೋಟ ಮೈದಾ, 1 ಚಮಚ ಬೆಣ್ಣೆ, ಉಪ್ಪು ಸೇರಿಸಿ, ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಕಣಕದ ಹಿಟ್ಟು ಕಲೆಸಿಡಿ. 15 ನಿಮಿಷದ ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿ ಪೂರಿ ಅಳತೆಗೆ ಲಟ್ಟಿಸಿ, ಕಡಲೇ ಬೇಳೆಯ ಮಿಶ್ರಣದ ಉಂಡೆ ಮಾಡಿ, ಮಧ್ಯದಲ್ಲಿ ಇಟ್ಟು, ಅಂಚುಗಳಿಗೆ ನೀರು ಸವರಿ, ಅಂಚುಗಳನ್ನು ಸೇರಿಸಿ, ಕಡುಬಿನ ಆಕಾರ ಮಾಡಿ, ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿಯಿರಿ. ಬಹಳ ರುಚಿಯಾಗಿರುತ್ತೆ. ಆರೋಗ್ಯಕರ ಕೂಡ, ಮೆಂತ್ಯ ಸೊಪ್ಪು ಹುರಿದು ಮಾಡಿರುವುದರಿಂದ ಕಹಿ ಇರುವುದಿಲ್ಲ. ಮಾಡಿ ನೋಡಿ.
ಧನ್ಯವಾದಗಳು.