ಬೇಸಿಗೆ ಬಂತೆಂದರೆ ಎಲ್ಲೆಡೆ ಕಲ್ಲಂಗಡಿ ಹಣ್ಣಿನ ರಾಶಿ ರಾಶಿ, ದೇಹವನ್ನು ತಂಪಾಗಿಡುವ ಈ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಹಣ್ಣನ್ನು ತಿಂದ ಮೇಲೆ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುವ ಮುನ್ನ ಸ್ವಲ್ಪ ಆ ಸಿಪ್ಪೆಯ ಮಹತ್ವದ ಬಗ್ಗೆ ತಿಳಿಯೋಣವೇ? ಕೆಂಪಾದ ಹಣ್ಣಿಗಿಂತ ಬಿಳಿ ಭಾಗವೇ ಹೆಚ್ಚು ಆರೋಗ್ಯಕಾರಿ, ಈ ಸಿಪ್ಪೆಯನ್ನು ವಿದೇಶಗಲ್ಲಿ ಜ್ಯೂಸ್, ಜಾಮ್ ಬಳಕೆಯಲ್ಲಿ ಹೇರಳವಾಗಿ ಬಳಸುತ್ತಾರೆ, ಹಾಗಾದರೆ ನಾವು ಸಹ ಈ ಸಿಪ್ಪೆಯಿಂದ ಒಂದು ರುಚಿಯಾದ, ಆರೋಗ್ಯಕರವಾದ ಪಲ್ಯವನ್ನು ಮಾಡೋಣವೇ?

ಕಲ್ಲಂಗಡಿ ಸಿಪ್ಪೆಯ ಪಲ್ಯ (water melon rind subji) ಮಾಡುವ ವಿಧಾನ:-

   

ಹಣ್ಣಿನ ಬಿಳಿ ಭಾಗವನ್ನು (ಹಸಿರು ಭಾಗವನ್ನು ತೆಗೆದು ಬಿಡಿ) ಚಿಕ್ಕ ಚಿಕ್ಕದಾಗಿ ಹೆಚ್ಚಿ, ಒಗ್ಗರಣೆಗೆ 2 ಚಮಚ ಎಣ್ಣೆ ಹಾಕಿ, ಕಾದ ಮೇಲೆ, ಸಾಸಿವೆ, ಜೀರಿಗೆ, ಈರುಳ್ಳಿ, ಕರಿ ಬೇವು, ಹಸಿ ಮೆಣಸಿನ ಕಾಯಿ, ಕಲ್ಲಂಗಡಿ ಸಿಪ್ಪೆಯ ತುಂಡುಗಳು ಹಾಕಿ ಬಾಡಿಸಿ, ತಟ್ಟೆಯನ್ನು ಮುಚ್ಚಿ 5 ನಿಮಿಷ, ಕಡಿಮೆ ಉರಿಯಲ್ಲಿ ಬೇಯಿಸಿ, ರುಚಿಗೆ ಉಪ್ಪು ಸೇರಿಸಿ, ಕಾಯಿತುರಿ, ನಿಂಬೆ ರಸ ಸೇರಿಸಿ, ಕಲೆಸಿ, ಚಪಾತಿಯೊಂದಿಗೆ ಬಡಿಸಿ. ಸೀಮೆ ಬದನೆ ಕಾಯಿಯ ಪಲ್ಯದ ರುಚಿ ಹೋಲುವ ಈ ಆರೋಗ್ಯಕರವಾದ, ಕಡಿಮೆ ಖರ್ಚಿನ ಪಲ್ಯವನ್ನು ಮಾಡುತ್ತೀರೆಂಬ ನಂಬಿಕೆ ನನಗಿದೆ.

ಧನ್ಯವಾದಗಳು.