KADAMBAM SAADAM (RICE) ಕದಂಬಂ ಅನ್ನ
ಕದಂಬಂ ಅನ್ನ ಮಾಡುವ ವಿಧಾನ:-
1 ಲೋಟ ತೊಗರಿ ಬೇಳೆಯನ್ನು ತೊಳೆದು 3 ವಿಷಲ್ ಕೂಗಿಸಿ ಬೇಯಿಸಿಡಿ. 1 ಲೋಟ ಅಕ್ಕಿ ತೊಳೆದು ಸಾಧಾರಣವಾಗಿ ಮಾಡುವ ಹಾಗೆ ಅನ್ನ ಮಾಡಿಡಿ. ತರಕಾರಿಗಳನ್ನು ತೊಳೆದು, ದೊಡ್ಡದಾಗಿ ಹೆಚ್ಚಿಡಿ. ಈರುಳ್ಳಿ, ಬೆಳ್ಳುಳ್ಳಿ ಬಿಟ್ಟು ಯಾವ ತರಕಾರಿಯಾದರೂ ಹಾಕಬಹುದು ಬೂದುಗುಂಬಳ, ಸಿಹಿಗುಂಬಳ, (ನೆನೆಸಿದ ಕಾಳು, ಕಡಲೇ ಬೀಜ ಬೇಕಾದಲ್ಲಿ ಬೇಳೆ ಜೊತೆ ಬೇಯಿಸಿ) ಹಾಕಿದಷ್ಟೂ ಚೆಂದ. 4 ಚಮಚ ಕಡಲೇ ಬೇಳೆ, 3 ಚಮಚ ಧನಿಯ, 3 ಚಮಚ ಗಸಗಸೆ, 1 ಇಂಚು ಚಕ್ಕೆ, 6 ಲವಂಗ, 2 ಏಲಕ್ಕಿ, ಖಾರಕ್ಕೆ 10 ಬ್ಯಾಡಗಿ, 8 ಕೆಂಪು ಒಣ ಮೆಣಸಿನ ಕಾಯಿ( ನಾನು ಪುಡಿ ಮಾಡಿ ಇಟ್ಟಿದ್ದೇನೆ) 4 ಚಮಚ ಒಣ ಕೊಬ್ಬರಿ ತುರಿ ಬೇರೆ ಹುರಿದು ಪುಡಿ ಮಾಡಿಡಿ. ನಿಂಬೆ ಗಾತ್ರದ ಹುಣಿಸೆ ಹಣ್ಣಿನ ರಸ ತೆಗೆದು ಇಡಿ.
ಕುಕ್ಕರಿನಲ್ಲಿ 6 ಚಮಚ ಎಣ್ಣೆ ಹಾಕಿ ಗಟ್ಟಿ ತರಕಾರಿ ಮೆಾದಲು ಹಾಕಿ ನಂತರ ಬೇಗ ಬೇಯುವ ತರಕಾರಿ ಹಾಕಿ 5 ನಿಮಿಷ ಬೇಯಿಸಿ, ನಂತರ ಹುಣಿಸೆ ರಸ ಹಾಕಿ, ಸ್ವಲ್ಪ ನೀರು ಸೇರಿಸಿ ತರಕಾರಿಗಳನ್ನು ಬೇಯಿಸಿ. ನಂತರ ಪುಡಿ ಮಾಡಿದ ಮಸಾಲೆ, ಉಪ್ಪು, ಚೂರು ಬೆಲ್ಲ, ಸ್ವಲ್ಪ ನೀರು ಸೇರಿಸಿ ಕುದಿಸಿ, ಬೇಯಿಸಿದ ಅನ್ನ, ಬೇಳೆ, 4 ಚಮಚ ತುಪ್ಪ ಹಾಕಿ ಕಲೆಸಿ, 5 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಕೊನೆಯಲ್ಲಿ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ (ಗೋಡಂಬಿ optional) ಹಾಕಿ, ಸ್ವಲ್ಪ ಒಣ ಕೊಬ್ಬರಿ ತುರಿ ಹಾಕಿ ಬಿಸಿಯಾಗಿ ಬಡಿಸಿ.
ಇದೇ ಮಸಾಲೆ ಪುಡಿ ಬಳಸಿ ಬಿಸಿ ಬೇಳೆ ಬಾತ್ ಸಹ ಮಾಡಬಹುದು. 1 ಲೋಟ ಬೇಳೆ ಬೇಯಿಸಿಡಿ. 1 ಲೋಟ ಅಕ್ಕಿ ನೆನೆಸಿಡಿ, ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ ತರಕಾರಿ ಹಾಕಿ ಬಾಡಿಸಿ, ಮಸಾಲೆ ಪುಡಿ, ಅಕ್ಕಿ ಹಾಕಿ ಹುರಿದು, ನಂತರ ನೀರು ಹುಣಿಸೆ ರಸ, ಚೂರು ಬೆಲ್ಲ, ಉಪ್ಪು, ಬೆಂದ ಬೇಳೆ, 4 ಚಮಚ ತುಪ್ಪ ಹಾಕಿ, ಅಕ್ಕಿ ತರಕಾರಿ ಬೆಂದ ಮೇಲೆ, ಒಗ್ಗರಣೆಗೆ ಸಾಸಿವೆ ಇಂಗು ಕರಿಬೇವು ಹಾಕಿದರೆ ಬಿಸಿ ಬೇಳೆ ಬಾತ್ ಸಿದ್ಧ. ಹೀಗೆ ಮಾಡಿದರೆ ಬಿಸಿ ಬೇಳೆ ಬಾತ್ , ಹಾಗೆ ಮಾಡಿದರೆ ಕದಂಬಂ, ನಿಮ್ಮ ಸಮಯ, ರುಚಿಗೆ ತಕ್ಕಂಕೆ ಮಾಡಿಕೊಳ್ಳಬಹುದು.
ಧನ್ಯವಾದಗಳು.