ಬೆಳ್ಳುಳ್ಳಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ! ತುಂಬಾ ಸುಲಭವಾಗಿ, ರುಚಿಯಾಗಿ, ಬೇಗನೆ ಮಾಡಬಹುದು!

ಮಾಡುವ ವಿಧಾನ:-

   

1 ಲೋಟ ಅಕ್ಕಿ ತೊಳೆದು ನೀವು ಸಾಧಾರಣವಾಗಿ ಅನ್ನ ಮಾಡುವ ಹಾಗೆ ಅನ್ನ ಮಾಡಿ ತಟ್ಟೆಯಲ್ಲಿ ಹರಡಿಡಿ.

1 ಮೀಡಿಯಂ ಗಾತ್ರದ ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ. 4 ಚಮಚದಷ್ಟು ತೆಂಗಿನ ಕಾಯಿ ತುರಿದು ಇಡಿ.

   

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಬೆಳ್ಳುಳ್ಳಿ, 8 ಬ್ಯಾಡಗಿ/ಕೆಂಪು ಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಎಣ್ಣೆ ಹಾಕದೆ ತೆಂಗಿನ ತುರಿ ಹಾಕಿ ಸ್ವಲ್ಪ ಬಿಸಿ ಮಾಡಿ ತೆಗೆದು, ತಣ್ಣಗಾದ ಮೇಲೆ ಹುರಿದ ಬೆಳ್ಳುಳ್ಳಿ, ಮೆಣಸಿನ ಕಾಯಿ ಜೊತೆ ಹಾಕಿ ನೀರು ಹಾಕದೆ ಪುಡಿ ಮಾಡಿಡಿ.

ಬಾಣಲೆಯಲ್ಲಿ 6 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಅರಿಶಿಣ ಹಾಕಿ ಸ್ವಲ್ಪ ಹುರಿದು, ನಂತರ ಪುಡಿ ಮಾಡಿದ ಮಿಶ್ರಣ , ಉಪ್ಪು ಹಾಕಿ 2 ನಿಮಿಷ ಫ್ರೈ ಮಾಡಿ, ಅನ್ನ, ಕೊತ್ತಂಬರಿ ಸೊಪ್ಪು, 1/2 ನಿಂಬೆ ರಸ (ಬೇಕಾದರೆ) ಹಾಕಿ ಕಲೆಸಿ, ಬಿಸಿಯಾಗಿ ಬಡಿಸಿ. ಹುರಿದ ಗೋಡಂಬಿ/ ಕಡಲೇ ಬೀಜ ಬೇಕಾದಲ್ಲಿ ಕೊನೆಯಲ್ಲಿ ಸೇರಿಸಬಹುದು. ಬೆಳ್ಳುಳ್ಳಿ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿ ಕೊಳ್ಳಿ.

ರುಚಿಯಾಗಿರುತ್ತೆ! ಬೇಗ ಮಾಡಬಹುದು.

ಧನ್ಯವಾದಗಳು.