ಮಾಡುವ ವಿಧಾನ:-
1 ಲೋಟ ಸಾಧಾರಣ ಅಕ್ಕಿಯನ್ನು ತೊಳೆದು 10 ನಿಮಿಷ ನೆನೆಸಿಡಿ.
4 ಹಸಿರು ಉದ್ದ ಬದನೇ ಕಾಯಿ ಹೆಚ್ಚಿ ನೀರಿನಲ್ಲಿ ಹಾಕಿಡಿ.
1 ಈರುಳ್ಳಿ, 1 ಕ್ಯಾಪ್ಸಿಕಮ್, 2 ಟೋಮೇಟೋ, 1 ಹಿಡಿ ಪುದೀನ, 1 ಹಿಡಿ ಕೊತ್ತಂಬರಿ ಸೊಪ್ಪು ಹೆಚ್ಚಿಡಿ.
1/2 ಲೋಟ ಅವರೆ ಕಾಳು ಬೇಯಿಸಿಡಿ. ಬೇಕಾದರೆ ಹಸಿ ಬಟಾಣಿ ಕೂಡ ಹಾಕಬಹುದು. ಒಗ್ಗರಣೆಗೆ ಬಟಾಣಿ ಹಾಕಿ ಮಾಡಬಹುದು.
1/2 ಹೋಳು ತೆಂಗಿನ ಕಾಯಿ ತುರಿದು, 2 ಬಾರಿ ರುಬ್ಬಿ ಕಾಯಿ ಹಾಲು ಸೋಸಿ ತೆಗೆದಿಡಿ.
ಕುಕ್ಕರಿನಲ್ಲಿ 6 ಚಮಚ ಎಣ್ಣೆ ಹಾಕಿ, 1 ಇಂಚು ಚಕ್ಕೆ, 4 ಲವಂಗ, 4 ಏಲಕ್ಕಿ, 1 ಅನಾನಸ್ ಹೂವು ಹಾಕಿ ಹುರಿದು, ಈರುಳ್ಳಿ, ಕ್ಯಾಪ್ಸಿಕಮ್, ಬದನೇ ಕಾಯಿ, ಪುದೀನ ಹಾಕಿ ಸ್ವಲ್ಪ ಹುರಿದು, ನಂತರ ಟೊಮೇಟೋ, ನೆನೆಸಿದ ಅಕ್ಕಿ, ಬೆಂದ ಅವರೇ ಕಾಳು, 1 ಚಮಚ ginger garlic paste, 2 ಚಮಚ ಖಾರಾ ಪುಡಿ, 1 ಚಮಚ ಗರಂ ಮಸಾಲ, ಉಪ್ಪು ಹಾಕಿ ಸ್ವಲ್ಪ ಬಾಡಿಸಿ. ನಂತರ ಕಾಯಿ ಹಾಲು+ ನೀರು ಎರಡೂ ಸೇರಿಸಿ 2 ಲೋಟ ಹಾಕಿ ಕಲೆಸಿ, ಮುಚ್ಚಳ ಹಾಕಿ 2 ವಿಷಲ್ ಕೂಗಿಸಿ. ಕುಕ್ಕರ್ ತಣ್ಣಗಾದ ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ನಿಂಬೆ ರಸ ಹಾಕಿ, ಕಲೆಸಿ ಮೊಸರು ಬಜ್ಜಿ ಜೊತೆ ಬಡಿಸಿ.
ಸಾಧಾರಣ ವಾಂಗೀ ಬಾತಿಗಿಂತ ರುಚಿ ಹೆಚ್ಚು ಇರುತ್ತೆ. ಕಾಯಿ ಹಾಲು ವಿಶೇಷ ರುಚಿ ಕೊಡುತ್ತೆ. ಬೇಕಾದರೆ 1 ಹಿಡಿ ಮೆಂತ್ಯ ಸೊಪ್ಪು ಕೂಡ ಒಗ್ಗರಣೆಗೆ ಹಾಕಬಹುದು. ಮೆಂತ್ಯದ ವಾಸನೆ ತುಂಬಾ ಚೆನ್ನಾಗಿರುತ್ತದೆ. ಬಡಿಸುವಾಗ ಚಕ್ಕೆ, ಲವಂಗ ಇದನ್ನೆಲ್ಲಾ ತೆಗೆದು ಬಡಿಸಿ.
ನಾನು ಖಾರಾ ಪುಡಿ ಎಂದು ಹೇಳಿರುವ ಕಡೆಯೆಲ್ಲಾ ನಾನು ಮನೆಯಲ್ಲಿ ಎಣ್ಣೆ ಹಾಕಿ ಹುರಿದು ಪುಡಿ ಮಾಡಿದ BYADAGI ಮೆಣಸಿನ ಕಾಯಿ ಹಾಕಿದ್ದೇನೆ. Ready made ಖಾರಾ ಪುಡಿ ನಾವು ಹೆಚ್ಚು ಬಳಸೋಲ್ಲ.
ಧನ್ಯವಾದಗಳು.
Leave A Comment