ಬೆಳ್ಳುಳ್ಳಿ ತನ್ನಲ್ಲಿ ಬೇಕಾದಷ್ಟು ಒಳ್ಳೆಯ ಅಂಶಗಳನ್ನು ತುಂಬಿಕೊಂಡಿದೆ. ಜೀರ್ಣಕಾರಿ, gastric, cancer, ಹೃದಯ ಸಂಬಂಧಿ ತೊಂದರೆಗಳ ವಿರುದ್ಧ ಹೋರಾಡುವ ಶಕ್ತಿ ಈ ಪುಟ್ಟ ತರಕಾರಿಗಿದೆ. ಇಂತಹ ಬೆಳ್ಳುಳ್ಳಿ ಪ್ರಿಯರಿಗಾಗಿ ಒಂದು ಸಿಂಪಲ್, ರುಚಿಯಾದ ರೆಸಿಪಿ!

ಬೆಳ್ಳುಳ್ಳಿ ಗೊಜ್ಜು ಮಾಡುವ ವಿಧಾನ:-

   

1/2 ಬಟ್ಟಲು ಸಿಪ್ಪೆ ತೆಗೆದ ಬೆಳ್ಳುಳ್ಳಿ ರೆಡಿ ಮಾಡಿಡಿ. ಬೇಕಾದರೆ ಜಜ್ಜಿ/ಚಿಕ್ಕದಾಗಿ ಹೆಚ್ಚಿ ಕೂಡ ಹಾಕಬಹುದು. ನಾನು ಹಾಗೇ ಹಾಕಿದ್ದೇನೆ.

ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಲ್ಲಿ ನೆನೆಸಿ ರಸ ತೆಗೆದಿಡಿ.

   

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಕಾದ ಮೇಲೆ ಸಾಸಿವೆ, ಜೀರಿಗೆ, ಕರಿಬೇವು ಹಾಕಿ, ನಂತರ ಸಿಪ್ಪೆ ತೆಗೆದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಬಾಡಿಸಿ, 2 ಚಮಚ ಸಾಂಬಾರ್ ಪುಡಿ, 1/2 ಚಮಚ ಧನಿಯ ಪುಡಿ, 1/2 ಚಮಚ ಖಾರಾ ಪುಡಿ ಹಾಕಿ, ಸ್ವಲ್ಪ ಬಾಡಿಸಿ, ನಂತರ ಹುಣಿಸೆ ರಸ, ಚೂರು ಬೆಲ್ಲ, ಉಪ್ಪು ಹಾಕಿ ಬೆಳ್ಳುಳ್ಳಿ ಮೆತ್ತಗಾಗಿ, ಗೊಜ್ಜು ಸ್ವಲ್ಪ ಗಟ್ಟಿಯಾಗಿ, ಎಣ್ಣೆ ಅಂಚುಗಳನ್ನು ಬಿಡುವವರೆಗೆ ಸಣ್ಣ ಉರಿಯಲ್ಲಿ ಕುದಿಸಿ, ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ.

   

ಬಿಸಿ ಬಿಸಿ ಅನ್ನದ ಜೊತೆ 1 ಚಮಚ ತುಪ್ಪ ಹಾಕಿ, ಜೊತೆ 2 ಹಪ್ಪಳ ಇದ್ದರೆ, ಆಹಾ! ತಿಂದರೆ ಮಾತ್ರ ಗೊತ್ತಾಗುವುದು! ಬಾಯಿ ಕೆಟ್ಟಿದ್ದಾಗ, ಊಟ ರುಚಿಸದಾಗ ಮಾಡಿ ನೋಡಿ!!! ಹುಳಿ, ಬೆಲ್ಲ, ಖಾರಾ ನಿಮ್ಮ ಅಭಿರುಚಿಗೆ ತಕ್ಕ ಹಾಗೆ ಹಾಕಿ ಮಾಡಿ.

ಬೇಕಾದರೆ 1 ಹೆಚ್ಚಿದ ಈರುಳ್ಳಿ, 1 ಟೊಮೇಟೋ ಒಗ್ಗರಣೆಗೆ ಹಾಕಬಹುದು. ನಾನು ಹಾಕಿಲ್ಲ.

ಬದಲಾವಣೆ ಬೇಕಾದರೆ, ಒಗ್ಗರಣೆಗೆ ಕಡಲೇ ಬೇಳೆ, ಉದ್ದಿನ ಬೇಳೆ ಹಾಕಿ, ಗೊಜ್ಜು ಮಾಡಿ, ಅನ್ನದ ಜೊತೆ ಕಲೆಸಿ, ಕೊನೆಯಲ್ಲಿ ಕರಿದ ಕಡಲೇ ಬೀಜ ಹಾಕಿದರೆ, ರುಚಿಯಾದ ಬೆಳ್ಳುಳ್ಳಿ ಚಿತ್ರಾನ್ನ ಸಿದ್ಧ!!!

ಧನ್ಯವಾದಗಳು.