ಮಾಡುವ ವಿಧಾನ:-
1 ಅಳತೆ ಚಿರೋಟಿ ರವೆ, 1/2 ಅಳತೆ ಮೈದಾ, ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ, ಕಾದ ಎಣ್ಣೆ 1 ಚಮಚ ಹಾಕಿ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಪೂರಿ ಹಿಟ್ಟು ಕಲೆಸಿ 10 ನಿಮಿಷ ಮುಚ್ಚಿಡಿ.
1 ಕ್ಯಾಪ್ಸಿಕಂ, 1 ಕ್ಯಾರೆಟ್, 10 ಎಳೆಯ ಬೀನ್ಸ್ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಹೆಚ್ಚಿದ ತರಕಾರಿ ಹಾಕಿ, 1/2 ಬಟ್ಟಲು ಹಸಿ ಬಟಾಣಿ, 1/2 ಬಟ್ಟಲು ಸ್ವೀಟ್ ಕಾರ್ನ್ ಹಾಕಿ ಸ್ವಲ್ಪ ಸಮಯ ಹುರಿದು, ಸ್ವಲ್ಪ ನೀರು ಹಾಕಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಉಪ್ಪು, 1/2 ಚಮಚ ಖಾರದ ಪುಡಿ, 1 ಚಮಚ ಟೊಮೇಟೊ ಸಾಸ್ ಹಾಕಿ ಸ್ವಲ್ಪ ಹುರಿಯಿರಿ. ಒಲೆಯಿಂದ ತೆಗೆದು 50 ಗ್ರಾಂ ಚೀಸ್ ತುರಿದು ಹಾಕಿ ಕಲೆಸಿದರೆ ಮಿಶ್ರಣ ಸಿದ್ಧ!
ಕಲೆಸಿದ ಪೂರಿ ಹಿಟ್ಟಿನಿಂದ ಚಪಾತಿ ಉಂಡೆಯಷ್ಟು ಹಿಟ್ಟು ತೆಗೆದುಕೊಂಡು ತೆಳ್ಳಗೆ ಲಟ್ಟಿಸಿ ಅಲ್ಲಲ್ಲಿ ಫೋರ್ಕ್ ನಿಂದ ಚುಚ್ಚಿ (ಹೀಗೆ ಮಾಡುವುದರಿಂದ ಪಫ್ ಉಬ್ಬುವುದಿಲ್ಲ) ಆಯುತಾಕಾರವಾಗಿ (Rectangle) ಕಟ್ ಮಾಡಿ, ಅದನ್ನು 4 ಭಾಗ ಮಾಡಿ(ಚಿತ್ರ ನೋಡಿ), ಅಂಚುಗಳಿಗೆ ನೀರು ಸವರಿಡಿ. 1 ಭಾಗದ ಮೇಲೆ 1 ಚಮಚ ತರಕಾರಿ ಮಿಶ್ರಣ ಹಾಕಿ ಇನ್ನೊಂದು ಭಾಗ ಅದರ ಮೇಲೆ ಹಾಕಿ ಅಂಚುಗಳನ್ನು ಸ್ವಲ್ಪ ಒತ್ತಿ. ಫೋರ್ಕ್ ನ ಹಿಂಬದಿಯಿಂದ ಸುತ್ತಲೂ ಒತ್ತಿದರೆ ಅದು ಕರಿಯುವಾಗ ಬೇರೆ ಬೇರೆ ಆಗುವುದಿಲ್ಲ, ಮತ್ತು ಸುತ್ತಲೂ Design ತುಂಬಾ ಚೆನ್ನಾಗಿ ಬರುತ್ತದೆ. ಹೀಗೆ ಎಲ್ಲಾ ಪಫ್ ಗಳು ಸಿದ್ಧವಾದ ಮೇಲೆ ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಒಂದು ಬಾರಿ ೩ ಅಥವಾ ೪ ಹಾಕಿ ಕೆಂಪಾಗಿ ಗರಿ ಗುರಿಯಾಗುವರೆಗೆ ಕರಿಯಿರಿ. ನಂತರ ಕರಿದ ವೆಜ್ ಪಫ್ ಗಳನ್ನು ಟೊಮೇಟೊ ಸಾಸ್ ಹಾಕಿ ತಿನ್ನಬಹುದು!
ಧನ್ಯವಾದಗಳು
Leave A Comment