ಚಪಾತಿ, ಪೂರಿ, ಜೀರಾ ರೈಸ್, ಬಿಸಿ ಅನ್ನ ಎಲ್ಲದರ ಜೊತೆ ತುಂಬಾ ಚೆನ್ನಾಗಿರುತ್ತದೆ.

ಮಾಡುವ ವಿಧಾನ:-

4 ಟೊಮೇಟೋ ತೊಳೆದು ಬಿಸಿ ನೀರಲ್ಲಿ ಹಾಕಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಡಿ.

4 ಚಮಚ ಕಾಯಿ ತುರಿ, 1 ಚಮಚ ಹುರಿಗಡಲೆ, 8 ಗೋಡಂಬಿ ನುಣ್ಣಗೆ ರುಬ್ಬಿಡಿ.

   

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಚಿಟಿಕೆ ಅರಿಶಿಣ, ಕರಿಬೇವು, ಹೆಚ್ಚಿದ ಈರುಳ್ಳಿ, 1 ಚಮಚ ಖಾರಾ ಪುಡಿ, 1/2 ಚಮಚ ಧನಿಯಾ ಪುಡಿ, ಉಪ್ಪು ಹಾಕಿ ಸ್ವಲ್ಪ ಹುರಿದು, ನಂತರ ರುಬ್ಬಿದ ಟೊಮೇಟೋ ಹಾಕಿ ಸ್ವಲ್ಪ ಕುದಿಸಿ. ರುಬ್ಬಿದ ಗೋಡಂಬಿ ಮಿಶ್ರಣ, ಸ್ವಲ್ಪ ನೀರು ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಟೊಮೇಟೋ ಕುರ್ಮಾ ಸಿದ್ಧ!

ಖಾರಾ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿಕೊಳ್ಳಿ.

ಧನ್ಯವಾದಗಳು.