ಸಬ್ಬಕ್ಕಿ ಪಾಯಸ ಮಕ್ಕಳ ಇಷ್ಟವಾದ ಪಾಯಸ!

ಮಾಡುವ ವಿಧಾನ:-

1 ಚಮಚ ತುಪ್ಪ ಹಾಕಿ 1 ಲೋಟ ಸಬ್ಬಕ್ಕಿಯನ್ನು 2 ನಿಮಿಷ ಹುರಿಯಿರಿ. ಕುದಿಯುವ ನೀರು ಹಾಕಿ ಮೆತ್ತಗೆ ಆಗುವವರೆಗೆ ಬೇಯಿಸಿ. ಸಬ್ಬಕ್ಕಿ ಪೂರ್ತಿ ಬೆಂದಾಗ ಪಾರದರ್ಶಕ ಆಗುತ್ತದೆ( Transparent). ಒಂದೆರಡು ನಿಮಿಷ ಹಾಗೇ ಬಿಟ್ಚು ಮೇಲಿನ ತಿಳಿಯನ್ನು ತೆಗೆದು ಬಿಡಿ.

1/4 ಲೀಟರ್ ಹಾಲು ಕಾಯಲು ಇಡಿ. ಬೆಂದ ಸಬ್ಬಕ್ಕಿಗೆ ಬಿಸಿ ಹಾಲು, 1/2 ಲೋಟ ಸಕ್ಕರೆ ಹಾಕಿ (ಸಿಹಿ ನಿಮ್ಮ ರುಚಿಗೆ ತಕ್ಕ ಹಾಗೆ) ಸಣ್ಣ ಉರಿಯಲ್ಲಿ ಸಕ್ಕರೆ ಕರಗುವವರೆಗೆ ತಿರುಗಿಸುತ್ತಾ ಬೇಯಿಸಿ. ಚಿಟಿಕೆ ಏಲಕ್ಕಿ ಪುಡಿ ಹಾಕಿ ಒಲೆಯಿಂದ ಇಳಿಸಿ.

   

ಒಂದು ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ಪಾಯಸಕ್ಕೆ ಸೇರಿಸಿದರೆ ರುಚಿಯಾದ ಸಬ್ಬಕ್ಕಿ ಪಾಯಸ ಸಿದ್ಧ!

ಹೀಗೆ ಪಾಯಸ ಮಾಡಿದರೆ ಕಾಳು ಒಂದಕ್ಕೊಂದು ಅಂಟುವುದಿಲ್ಲ! ನೀವು ಬೇಕಾದರೆ ಸಬ್ಬಕ್ಕಿ ಹುರಿದು ಕುಕ್ಕರಿನಲ್ಲಿ ಹೆತ್ತು ನೀರು ಹಾಕಿ 2 ವಿಷಲ್ ಕೂಗಿಸಿ ಪಾಯಸ ಮಾಡಬಹುದು.

ಧನ್ಯವಾದಗಳು.