RAVA PONGAL ರವಾ ಪೊಂಗಲ್
ರವಾ ಪೊಂಗಲ್ ಮಾಡುವ ವಿಧಾನ:-
1 ಲೋಟ medium ರವೆಯನ್ನು ಹುರಿದಿಟ್ಟುಕೊಳ್ಳಿ, 1 ಲೋಟ ಹೆಸರು ಬೇಳೆಯನ್ನು ಸ್ವಲ್ಪ ಹುರಿದು 2 ಲೋಟ ನೀರು ಹಾಕಿ 2 ವಿಷಲ್ ಕೂಗಿಸಿ ಇಟ್ಟು ಕೊಳ್ಳಿ, 1 ಚಮಚ ಕರಿ ಮೆಣಸು, 1 ಚಮಚ ಜೀರಿಗೆ ಹುರಿದು ತರಿ ತರಿಯಾಗಿ ಪುಡಿ ಮಾಡಿ ಇಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ, ಮೆಣಸು ಜೀರಿಗೆ ಪುಡಿ, ಹಿಂಗು, ಕರಿಬೇವು, 1/2 ಇಂಚು ತುರಿದ ಶುಂಠಿ, 4 ಉದ್ದಕ್ಕೆ ಸೀಳಿದ ಹಸಿ ಮೆಣಸಿನ ಕಾಯಿ ಹಾಕಿ ಸ್ವಲ್ಪ ಬಾಡಿಸಿ, ನಂತರ ಬೇಯಿಸಿದ ಹೆಸರು ಬೇಳೆ, 3 ಲೋಟ ನೀರು, ರುಚಿಗೆ ಉಪ್ಪು ಹಾಕಿ, ಕುದಿಸಿ, ಸ್ವಲ್ಪ ಸ್ವಲ್ಪ ಹುರಿದ ರವೆ ಹಾಕಿ, ಚೆನ್ನಾಗಿ ಕಲೆಸಿ, ತಟ್ಟೆ ಮುಚ್ಚಿ, ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿ, ಕೊನೆಯಲ್ಲಿ ಕಾಯಿ ತುರಿ, ಕೊತ್ತಂಬರಿ ಸೊಪ್ಪು, (ನಿಂಬೆ ರಸ optional), 2 ಚಮಚ ತುಪ್ಪ ಹಾಕಿ ಕಲೆಸಿ, ಬಿಸಿಯಾಗಿ ಮೊಸರು ಬಜ್ಜಿ/ಚಟ್ನಿ/ಹುಣಿಸೆ ಗೊಜ್ಜಿನೊಂದಿಗೆ ಬಡಿಸಿ. ಪೊಂಗಲ್ ಎಂದ ಮೇಲೆ ತುಪ್ಪ ತುಸು ಹೆಚ್ಚೇ ಇರಬೇಕು.
ಹುಣಿಸೆ ಗೊಜ್ಜು ಮಾಡುವ ವಿಧಾನ:-
ನಿಂಬೆ ಗಾತ್ರದ ಹುಣಿಸೆ ಹಣ್ಣಿದ ರಸ ತೆಗೆದಿಡಿ, ಒಗ್ಗರಣೆಗೆ ಸಾಸಿವೆ, ಕರಿಬೇವು ಹಿಂಗು, ರಸಂ ಪುಡಿ 2 ಚಮಚ, ಉಪ್ಪು, ಚೂರು ಬೆಲ್ಲ, ಹುಣಿಸೆ ರಸ ಹಾಕಿ ಕುದಿಸಿ ದರೆ ಹುಣಿಸೆ ಗೊಜ್ಜು ರೆಡಿ, ಈ ಗೊಜ್ಜು ಖಾರಾ ಪೊಂಗಲ್ ಜೊತೆ ಸಹ ಚೆನ್ನಾಗಿರುತ್ತದೆ.
ಖಾರಾ ಪೊಂಗಲ್
ರವಾ ಪೊಂಗಲ್ ರೆಸಿಪಿ ಸ್ವಲ್ಪ ಬದಲಾವಣೆ ಮಾಡಿದರೆ ಖಾರಾ ಪೊಂಗಲ್ ಮಾಡಬಹುದು. 1 ಲೋಟ ಅಕ್ಕಿ, 1/2 ಲೋಟ ಹೆಸರು ಬೇಳೆ ಸ್ವಲ್ಪ ಹುರಿದು, 4 ಲೋಟ ನೀರು ಹಾಕಿ 2 ವಿಷಲ್ ಕೂಗಿಸಿ ಇಟ್ಟು ಕೊಳ್ಳಿ, ಒಗ್ಗರಣೆ ಇದೇ ರೆಸಿಪಿಯಂತೆ ಮಾಡಿ, ಬೆಂದ ಅಕ್ಕಿ ಬೇಳೆ ಮಿಶ್ರಣ ಹಾಕಿ 5 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿದರೆ ಖಾರಾ ಪೊಂಗಲ್ ರೆಡಿ.
ನೀವು ಖಾರಾ ಪೊಂಗಲ್ ಮತ್ತಷ್ಟು ರುಚಿಯಾಗಿ ಮಾಡಬೇಕೆಂದರೆ ಬೇಯಿಸುವಾಗ ಅಥವಾ ಒಗ್ಗರಣೆ ಹಾಕಿ ಪೊಂಗಲ್ ಹದಕ್ಕೆ ಮಿಶ್ರ ಮಾಡುವಾಗ ಹಾಲು ಹಾಕಿದರೆ , ಖಾರಾ ಮಿಲ್ಕ್ ಪೊಂಗಲ್ ಸಿದ್ಧ!!! ಮಾಡಿ ನೋಡಿ,
ಧನ್ಯವಾದಗಳು.