ರುಚಿಯಾದ, ಜನ ಪ್ರಿಯ Side dish! ಮಾಡುವುದು ತುಂಬಾ ಸುಲಭ!

ಮಾಡುವ ವಿಧಾನ:-

      

100 ಗ್ರಾಂ ಪನ್ನೀರ್ ಅನ್ನು ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ.

1 ಈರುಳ್ಳಿ, 2 ಟೋಮೇಟೋ, 12 ಗೋಡಂಬಿಯನ್ನು 1 ಚಮಚ ಬೆಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ.

   

ಬಾಣಲೆಯಲ್ಲಿ 1 ಚಮಚ ಬೆಣ್ಣೆ ಹಾಕಿ 1/2 ಇಂಚು ಚಕ್ಕೆ, 2 ಲವಂಗ, 2 ಏಲಕ್ಕಿ ಹಾಕಿ ಹುರಿದು, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಚ್ , ರುಬ್ಬಿದ ಮಿಶ್ರಣ ಹಾಕಿ ಸ್ವಲ್ಪ ಕುದಿಸಿ, 1/2 ಚಮಚ ಗರಂ ಮಸಾಲ, 1 ಖಾರಾ ಪುಡಿ, 1/2 ಚಮಚ ಧನಿಯಾ ಪುಡಿ, ಉಪ್ಪು, ಸ್ವಲ್ಪ ನೀರು, ಪನ್ನೀರ್ ತುಂಡುಗಳು ಹಾಕಿ ಕುದಿಸಿ, ಚಿಟಿಕೆ ಸಕ್ಕರೆ ಬೇಕಾದಲ್ಲಿ ಹಾಕಿ ಕೊನೆಯಲ್ಲಿ 1 ಚಮಚ ಫ್ರೆಶ್ ಕ್ರೀಂ, ಕೊತ್ತಂಬರಿ ಸೊಪ್ಪನ್ನು ಹಾಕಿ ಕಲೆಸಿದರೆ ರುಚಿಯಾದ ಪನೀರ್ ಬಟರ್ ಮಸಾಲೆ ರೆಡಿ!

ಧನ್ಯವಾದಗಳು.