ಸೂಪ್ ಬಹಳ ಆರೋಗ್ಯಕರ ಆಹಾರ! ದೇಹಕ್ಕೆ ಚೈತನ್ಯ ಕೊಡುತ್ತದೆ! ಅದರಲ್ಲೂ ಪಾಲಾಕ್ ಸೂಪ್ ಇನ್ನೂ ಆರೋಗ್ಯಕ್ಕೆ ಒಳ್ಳೆಯದು.

ಮಾಡುವ ವಿಧಾನ:-

   

2 ಕಟ್ಟು ಪಾಲಾಕ್ ಸೊಪ್ಪು ತೊಳೆದು, (ಕಡ್ಡಿ ಎಳೆಯದಾಗಿದ್ದರೆ ಅದನ್ನು ಸಹ ಹಾಕಿ)

   

2 ಹಸಿ ಮೆಣಸಿನಕಾಯಿ ಕಾಯಿ, 1/2 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, 1/2 ಈರುಳ್ಳಿ, 1 ಟೊಮೇಟೊ ಜೊತೆ ಕುಕ್ಕರ್ ಅಥವಾ ಬಾಣಲೆಯಲ್ಲಿ ಮುಚ್ಚಳ ಹಾಕದೆ ಬೇಯಿಸಿ. ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ.

   

ಬಾಣಲೆಯಲ್ಲಿ ರುಬ್ಬಿದ ಮಿಶ್ರಣವನ್ನು, ಉಪ್ಪು, 100 ಮಿ ಲೀ ಹಾಲು ಹಾಕಿ 3 ಅಥವಾ 4 ನಿಮಿಷ ಕುದಿಸಿ, ಕೊನೆಯಲ್ಲಿ 1 ಚಮಚ ಫ್ರೆಶ್ ಕ್ರೀಂ, 1/4 ಚಮಚ ಪೆಪ್ಪರ್ ಪುಡಿ ಹಾಕಿ ಕಲೆಸಿದರೆ ರುಚಿ ರುಚಿಯಾದ ಪಾಲಾಕ್ ಸೂಪ್ ಸಿದ್ಧ!

ಧನ್ಯವಾದಗಳು