PALAK RICE ಪಾಲಕ್ ರೈಸ್
ಮಾಡುವ ವಿಧಾನ:-
1 ಲೋಟ ಬಾಸುಮತಿ ಅಕ್ಕಿ ತೊಳೆದು ಕುಕ್ಕರಿನಲ್ಲಿ 4 ಲೋಟ ನೀರು ಹಾಕಿ ಮುಚ್ಚಳ ಹಾಕದೆ ಬೇಯಿಸಿ ನೀರು ಸೋರಿ ಹಾಕಿಡಿ.
4 ಕಟ್ಟು ಪಾಲಕ್ ಸೊಪ್ಪು ಚೆನ್ನಾಗಿ ತೊಳೆದು ಬಾಣಲೆಯಲ್ಲಿ ನೀರು ಹಾಕಿ 2 ಹಸಿ ಮೆಣಸಿನ ಕಾಯಿ ಜೊತೆ ಬೇಯಿಸಿ ನೀರು ಸೋರಿ ಹಾಕಿಡಿ. ( ಮೆಣಸಿನ ಕಾಯಿ ನಿಮಗೆ ಬೇಕಾದಷ್ಟು ಹಾಕಿ ಕೊಳ್ಳಿ) ಮುಚ್ಚಳ ಮುಚ್ಚಿ ಬೇಯಿಸ ಬೇಡಿ! ಬಣ್ಣ ಬದಲಾಗುತ್ತದೆ. ತಣ್ಣಗಾದ ಮೇಲೆ ರುಬ್ಬಿಡಿ
1 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, 1 ಇಂಚು ಚಕ್ಕೆ , 4 ಲವಂಗ, 2 ಏಲಕ್ಕಿ ಹಾಕಿ ಹುರಿದು, ಹೆಚ್ಚಿದ ಈರುಳ್ಳಿ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಚ್ ಹಾಕಿ ಹುರಿದು, 1/2 ಚಮಚ ಗರಂ ಮಸಾಲ, ರುಬ್ಬಿದ ಪಾಲಕ್ ಮಿಶ್ರಣ ಹಾಕಿ ಹುರಿದು ಬೆಂದ ಬಾಸುಮತಿ ಅನ್ನ, ಉಪ್ಪು ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ 3 ರಿಂದ 4 ನಿಮಿಷ ಬೇಯಿಸಿದರೆ ರುಚಿಯಾದ, ಆರೋಗ್ಯಕರವಾದ ಪಾಲಕ್ ರೈಸ್ ಸಿದ್ಧ! ಮೊಸರು ಬಜ್ಜಿಯೊಂದಿಗೆ ಬಡಿಸಿದರೆ ಒಳ್ಳೆಯ Combination!
ಜೀರಾ ರೈಸ್ ಅಥವಾ ಸೋನಾ ಮಸೂರಿ ಅಕ್ಕಿ ಬೇಕಾದರೂ ಹಾಕಿ ಮಾಡಬಹುದು! ಜೀರಾ ರೈಸ್ ಹಾಕುವುದಾದರೆ ೧ ಅಳತೆ ಅಕ್ಕಿಗೆ ೧ ಅಥವಾ ೧ ೧/೪ ನೀರು ಹಾಕಿ ಅನ್ನ ಮಾಡಿ ಅನ್ನ ಉದುರುದುರಾಗಿ ಮಾಡಿ ಕಲೆಸಿ. ಮಕ್ಕಳಿಗೆ, ಪತಿಯ ಲಂಚ್ ಬಾಕ್ಸ್ ಗೆ ತುಂಬಾ ಚೆನ್ನಾಗಿರುತ್ತದೆ.
ಧನ್ಯವಾದಗಳು.