MOSARU BELE ಮೊಸರು ಬೇಳೆ
ಮಾಡುವ ವಿಧಾನ:-
ತೊಗರಿ ಬೇಳೆಯನ್ನು ಹುಳಿ ಮಜ್ಜಿಗೆಯಲ್ಲಿ 4 ಗಂಟೆ ನೆನೆಸಿಡಿ. ನಂತರ ಮಜ್ಜಿಗೆಯಿಂದ ತೆಗೆದು ಸೋರಿಹಾಕಿ. ಮಜ್ಜಿಗೆ ಪೂರ್ತಿ ಹೋದ ಮೇಲೆ, ಒಗೆದ ಒಣಬಟ್ಟೆ ಮೇಲೆ ಹರಡಿ ನೆರಳಲ್ಲಿ 1 ಗಂಟೆ ಒಣಗಿಸಿ.
ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಒಂದು ಜಾಲರ ಬಾಣಲೆಯಲ್ಲಿ ಇಡುವ ಹಾಗೆ ನೋಡಿ ಕೊಂಡು(ಚಿತ್ರ ನೋಡಿ), ಜಾಲರ ಬಾಣಲೆಯಲ್ಲಿ ಇಟ್ಟು ಸ್ವಲ್ಪ ಸ್ವಲ್ಪ ಬೇಳೆ ಹಾಕಿ ಕೆಂಪಗೆ ಕರಿದು, ಹೆಚ್ಚಿನ ಎಣ್ಣೆ ತೆಗೆದು, ಬೇಳೆ ಬಿಸಿ ಇರುವಾಗಲೇ ಖಾರಾ ಪುಡಿ, ಉಪ್ಪು, ಇಂಗು ಹಾಕಿ ಕಲೆಸಿ ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ.
ಈ ಬೇಳೆಯನ್ನು ಮೊಸರು ಹಾಕಿಕೊಂಡು ತಿಂದರೆ ತುಂಬಾ ಚೆನ್ನಾಗಿರುತ್ತದೆ! ಹೆಚ್ಚಿದ ಈರುಳ್ಳಿ, ಟೊಮೇಟೊ, ಕೊತ್ತಂಬರಿ ಸೊಪ್ಪನ್ನು ಹಾಕಿ ಕೂಡಾ ತಿನ್ನಬಹುದು! ತುಂಬಾ ಚೆನ್ನಾಗಿರುತ್ತದೆ!
ಹೆಸರು ಮಾತ್ರ ಮೊಸರು ಬೇಳೆ! ಆದರೆ ನೆನೆಸುವುದು ಮಜ್ಜಿಗೆಯಲ್ಲಿ!
ಧನ್ಯವಾದಗಳು.