KALLANGADI BEEJADA PAYASA ಕಲ್ಲಂಗಡಿ ಬೀಜದ ಪಾಯಸ
ಮಾಡುವ ವಿಧಾನ:-
1 ಬಟ್ಟಲು ಕಲ್ಲಂಗಡಿ ಬೀಜವನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. 1/2 ಬಟ್ಟಲು ಬೆಲ್ಲ ಅಥವಾ ಸಕ್ಕರೆ ಹಾಕಿ, 1/2 ಬಟ್ಟಲು ಹಾಲು ಹಾಕಿ, ದಪ್ಪ ತಳದ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಕುದಿಸಿ. ಬೆಲ್ಲ ಹಾಕುವುದರಿಂದ ಪಾಯಸ ಒಡೆದಂತಾಗಬಹುದು! ಕಡಿಮೆ ಉರಿಯಲ್ಲಿ ಕುದಿಸಿದರೆ ಒಳ್ಳೆಯದು! ಮೂರು ಅಥವಾ ನಾಲ್ಕು ನಿಮಿಷ ಕುದಿಸಿದರೆ ಸಾಕು.
ಕೊನೆಯಲ್ಲಿ ಚಿಟಿಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ ಸವಿಯಲು ಕೊಡಿ. ಸಿಹಿ ನಿಮ್ಮ ರುಚಿಗೆ ತಕ್ಕಷ್ಟು ಹಾಕಿಕೊಳ್ಳಿ!
ಈ ಪಾಯಸದ ರುಚಿ ಹೆಚ್ಚು ಕಡಿಮೆ ಗಸಗಸೆ ಪಾಯಸದ ಹಾಗೆ ಇರುತ್ತದೆ!
ಕಲ್ಲಂಗಡಿ ಬೀಜ Dry fruits shop ನಲ್ಲಿ ಸಿಗುತ್ತದೆ. ಇಲ್ಲದಿದ್ದರೆ ಹಣ್ಣಿನ ಬೀಜಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಉದುರಿಸಿ ಒರಟಾದ ಕಲ್ಲಿನ ಮೇಲೆ ಉಜ್ಜಿದರೆ
ಸಿಪ್ಪೆ ಹೊರಟು ಹೋಗುತ್ತದೆ, ನಂತರ ಸ್ವಲ್ಪ ನೀರು ಹಾಕಿ ತೊಳೆದು ಉಪಯೋಗಿಸಬಹುದು.
ಧನ್ಯವಾದಗಳು.