ಹಲೋ ಫ್ರೆಂಡ್ಸ್, ಬಹಳ ಮನೆಗಳಲ್ಲಿ ಬೆಳಗಿನ ತಿಂಡಿಗೆ ಇಡ್ಲಿ ಸಾಂಬಾರ್ ಖಾಯಂ, ಕೆಲವರು ಇಷ್ಟ ಪಟ್ಟು ತಿಂದರೆ, ಇನ್ನು ಕೆಲವರು ಕಷ್ಟ ಪಟ್ಟು ತಿನ್ನುತ್ತಾರೆ, ಹೀಗಿರುವಾಗ ಉಳಿದ, ಹುಳಿ ಬಂದ ಇಡ್ಲಿ ಹಿಟ್ಟಿನಿಂದ ರುಚಿಯಾದ, ವಿಭಿನ್ನವಾದ ಇಡ್ಲಿ ಮಾಡಬಹುದು.

ಕಾಂಚೀಪುರಂ ಮಸಾಲ ತಟ್ಟೆ ಇಡ್ಲಿ ಮತ್ತು ಕಡಲೇ ಬೇಳೆ ಚಟ್ನಿ ಮಾಡುವ ವಿಧಾನ:-

   

ಚಟ್ನಿಗೆ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, 4 ಚಮಚ ಕಡಲೇ ಬೇಳೆ, 1 ಹೆಚ್ಚಿದ ಈರುಳ್ಳಿ ಹಾಕಿ ಕೆಂಪಗೆ ಹುರಿದು, ಕಾಯಿ ತುರಿ, ಹುಣಸೇ ರಸ, ಹುರಿದ ಬ್ಯಾಡಗಿ ಮೆಣಸಿನ ಕಾಯಿ 8, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ, ಸಾಸಿವೆ ಹಿಂಗು ಕರಿಬೇವಿನ ಓಗ್ಗರಣೆ ಹಾಕಿ.

   

ಇಡ್ಲಿ ಹಿಟ್ಟಿಗೆ ನೆನೆಸಿದ ಕಡಲೇ ಬೇಳೆ 3 ಚಮಚ, ಸಣ್ಣಗೆ ಹೆಚ್ಚಿದ ಈರುಳ್ಳಿ 1, ಕಾಯಿ ಚೂರು, ಕೊತ್ತಂಬರಿ ಸೊಪ್ಪು, ಹುರಿದು ತರಿ ತರಿಯಾಗಿ ಪುಡಿ ಮಾಡಿದ ಮೆಣಸು ಜೀರಿಗೆ ಪುಡಿ 1 ಚಮಚ, ಉಪ್ಪು, ಸಾಸಿವೆ ಹಿಂಗು ಕರಿಬೇವಿನ ಓಗ್ಗರಣೆ, ಚಿಟಿಕೆ ಸೋಡ ಹಾಕಿ ಕಲೆಸಿ ಎಣ್ಣೆ ಸವರಿದ ತಟ್ಟೆಗಳಿಗೆ 1/2 ಇಂಚು ದಪ್ಪ ಇಡ್ಲಿ ಹಿಟ್ಟು ಹಾಕಿ standನಲ್ಲಿ ಜೋಡಿಸಿ ಕುಕ್ಕರಿನಲ್ಲಿ 12 ರಿಂದ 15 ನಿಮಿಷ ಬೇಯಿಸಿ, ಬಿಸಿಯಾಗಿ ತುಪ್ಪ ಅಥವಾ ಬೆಣ್ಣೆ, ಕಡಲೇ ಬೇಳೆ ಚಟ್ನಿಯೊಂದಿಗೆ ಬಡಿಸಿ. ಈ ಇಡ್ಲಿ ಜೊತೆ ಸಾಂಬಾರು ಬೇಕಿಲ್ಲ, ಸಣ್ಣಗೆ ಹೆಚ್ಚಿದ ಯಾವ ತರಕಾರಿ, ಸೊಪ್ಪು ಬೇಕಾದರೆ ಸೇರಿಸಿ ಕೊಳ್ಳಬಹುದು.

ಧನ್ಯವಾದಗಳು.