ರಸಂಗಳಲ್ಲಿ ಹಲವಾರು ಬಗೆ! ಒಬ್ಬೊಬ್ಬರದು ಒಂದೊಂದು ಶೈಲಿ ರಸಂ ಇರುತ್ತದೆ. ಇದು ನಮ್ಮ ಮನೆಯ ಶೈಲಿ. ರುಚಿ ಅದ್ಭುತವಾಗಿರುತ್ತದೆ!

ಅಯ್ಯಂಗಾರ್ಸ್ ರಸಂ ಮಾಡುವ ವಿಧಾನ:-

1/2 ಲೋಟ ತೊಗರಿ ಬೇಳೆಯನ್ನು (50 gms)ತೊಳೆದು 1 ಚಮಚ ಎಣ್ಣೆ, ಚಿಟಿಕೆ ಅರಿಶಿಣ ಹಾಕಿ 4 ವಿಷಲ್ ಕೂಗಿಸಿ. ಬೆಂದ ಬೇಳೆಯನ್ನು mixie/blender ನಲ್ಲಿ ನುಣ್ಣಗೆ ರುಬ್ಬಿ ಸ್ವಲ್ಪ ನೀರು ಸೇರಿಸಿ ತಿಳಿ ಮಾಡಿಡಿ.

2 ಟೀ ಚಮಚ ಕಡಲೇ ಬೇಳೆ, 2 ಟೀ ಚಮಚ ಉದ್ದಿನ ಬೇಳೆ, 1 1/2 ಟೀ ಚಮಚ ಕರಿ ಮೆಣಸು, 2 ಟೀ ಚಮಚ ಅಕ್ಕಿ, 2 ಬ್ಯಾಡಗಿ ಮೆಣಸಿನ ಕಾಯಿ ಬೇರೆ ಬೇರೆ ಹುರಿದು ಪುಡಿ ಮಾಡಿಡಿ. ಬ್ಯಾಡಗಿ ಮೆಣಸಿನ ಕಾಯಿಗೆ ಮಾತ್ರ ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ. ಮಿಕ್ಕ ಪದಾರ್ಥಗಳನ್ನು ಎಣ್ಣೆ ಹಾಕದೆ ಹುರಿಯಿರಿ.

   

4 ಚಮಚ ಕಾಯಿ ತುರಿಗೆ ನೀರು ಸೇರಿಸಿ ನುಣ್ಣಗೆ ರುಬ್ಬಿ ಕಾಯಿ ಹಾಲು ತೆಗೆದಿಡಿ.

ಬಾಣಲೆಯಲ್ಲಿ ಬೇಯಿಸಿದ ಬೇಳೆ, ಪುಡಿ ಮಾಡಿದ ಮಿಶ್ರಣ, ಉಪ್ಪು ಸ್ವಲ್ಪ ನೀರು ಬೇಕಾದರೆ ಸೇರಿಸಿ ಕುದಿಸಿ. ಇದು ಸ್ವಲ್ಪ ನೀರಾಗಿಯೇ ಇರಬೇಕು. ಕೊನೆಯಲ್ಲಿ ಕಾಯಿ ಹಾಲು ಹಾಕಿ ಒಲೆಯಿಂದ ಇಳಿಸಿ.

ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, 1 ನಿಂಬೆ ರಸ ಹಾಕಿದರೆ ರುಚಿಯಾದ ಅಯ್ಯಂಗಾರ್ಸ್ ರಸಂ ಸಿದ್ಧ!

ಈ ಪುಡಿ ಆಗ ಮಾಡಿ ಆಗಲೇ ರಸಂ ಮಾಡುವುದು, Instant Rasam! ಮತ್ತೆ ಮಾಡಬೇಕೆಂದರೆ ಮತ್ತೆ ಹುರಿದು ಪುಡಿ ಮಾಡಿ ಮಾಡುವುದು!

ಖಾರಾ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿಕೊಳ್ಳಿ.

ಧನ್ಯವಾದಗಳು.