ಹೆಸರು ಕಾಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ದೇಹಕ್ಕೆ ತಂಪು ಕೊಡುವ ಗುಣ ಈ ಹೆಸರು ಕಾಳಿಗಿದೆ! ಮೊಳಕೆ ಬಂದ ಹೆಸರು ಕಾಳು ಮತ್ತೂ ಆರೋಗ್ಯಕರ! ಇಂತಹ ಆರೋಗ್ಯಕರ ಮೆಾಳಕೆ ಹೆಸರು ಕಾಳಿನ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

1 ಲೋಟ ಬಾಸುಮತಿ ಅಕ್ಕಿ, 1/2 ಲೋಟ ಮೊಳಕೆ ಬಂದ ಹೆಸರು ಕಾಳು ತೊಳೆದು ನೀರು ಸೋರಿ ಹಾಕಿಡಿ.

1 ಈರುಳ್ಳಿ, 2 ಟೋಮೇಟೋ ಸಣ್ಣಗೆ ಹೆಚ್ಚಿಡಿ.

   

ಕುಕ್ಕರಿನಲ್ಲಿ 2 ಚಮಚ ಎಣ್ಣೆ ಹಾಕಿ, ಜೀರಿಗೆ, ಈರುಳ್ಳಿ, ಕರಿಬೇವು, ಟೋಮೇಟೋ, 1/2 ಇಂಚು ಹೆಚ್ಚಿದ ಶುಂಠಿ, 5 ಎಸಳು ಹೆಚ್ಚಿದ ಬೆಳ್ಳುಳ್ಳಿ, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಹುರಿದು 1/2 ಚಮಚ ಗರಂ ಮಸಾಲ, 1 ಚಮಚ ಖಾರಾ ಪುಡಿ, 1/4 ಚಮಚ ಜೀರಾ ಪುಡಿ, ತೊಳೆದ ಅಕ್ಕಿ, ಹೆಸರು ಕಾಳು, ಉಪ್ಪು ಹಾಕಿ ಕಲೆಸಿ, 4 ಲೋಟ ನೀರು ಹಾಕಿ 2 ವಿಷಲ್ ಕೂಗಿಸಿಡಿ.

   

ನಂತರ ಮುಚ್ಚಳ ತೆಗೆದು, ಹೆಚ್ಚಿದ ಕೊತ್ತಂಬರಿ ಸೊಪ್ಪು, 1 ಚಮಚ ತುಪ್ಪ, ನಿಂಬೆ ರಸ (ಬೇಕಾದರೆ) ಹಾಕಿ ಕಲೆಸಿ ಮೊಸರು ಬಜ್ಜಿಯೊಂದಿಗೆ ಬಡಿಸಿ.

ಆರೋಗ್ಯಕರ ಕಿಚಡಿ! ಒಮ್ಮೆ ಮಾಡಿ ನೋಡಿ! ಬಾಸುಮತಿ ಅಕ್ಕಿಯ ಬದಲು ಸೋನಾ ಮಸೂರಿ ಅಕ್ಕಿ ಬೇಕಾದರೂ ಹಾಕಬಹುದು! ಬಾಸುಮತಿ ಸುವಾಸನೆ ಇರುತ್ತೆ ಎಂದು ನಾನು ಅದನ್ನು ಹಾಕಿದ್ದೇನೆ.

ಧನ್ಯವಾದಗಳು.