GODHI ADAI & CARROT CHUTNEY (Healthy n Tasty)

ಗೋಧಿ ಅಡೈ ಮತ್ತು ಕ್ಯಾರೆಟ್ ಚಟ್ನಿ (ಆರೋಗ್ಯಕರ ಮತ್ತು ರುಚಿಕರ)

ಅಡೈ ಎಂದರೆ ತಮಿಳಿನಲ್ಲಿ ಮಿಶ್ರ ಬೇಳೆಗಳ ದೋಸೆ ಎಂದು ಅರ್ಥ! ಆರೋಗ್ಯಕರ ದೋಸೆ! ಅಕ್ಕಿಯಷ್ಟೇ ಪ್ರಮಾಣದ ಮಿಶ್ರ ಬೇಳೆಗಳನ್ನು ಸೇರಿಸಿ ಮಾಡುವ ದೋಸೆ! ಅದೇ ಆರೋಗ್ಯಕರ ದೋಸೆಯನ್ನು ಮತ್ತಷ್ಟು ಆರೋಗ್ಯಕರ ಮಾಡುವ ರೆಸಿಪಿ ನಿಮಗಾಗಿ!

ಗೋಧಿ ಅಡೈ ಮಾಡುವ ವಿಧಾನ:-

 

1 ಲೋಟ ಗೋಧಿ ನುಚ್ಚು ತೊಳೆದು 2 ಗಂಟೆ ನೆನೆಸಿಡಿ. 1 ಲೋಟದಷ್ಟು ತೊಗರಿ ಬೇಳೆ, ಹೆಸರು ಬೇಳೆ, ಉದ್ದಿನ ಬೇಳೆ, ಕಡಲೇ ಬೇಳೆಯನ್ನು ತೊಳೆದು, 1 ಚಮಚ ಜೀರಿಗೆ, 1/2 ಚಮಚ ಕರಿ ಮೆಣಸು, 4 ಬ್ಯಾಡಗಿ ಮೆಣಸಿನ ಕಾಯಿ ಜೊತೆಯಲ್ಲಿ ಹಾಕಿ 2 ಗಂಟೆ ನೆನೆಸಿಡಿ. (4 ಬೇಳೆಗಳೂ 1/4 ಲೋಟ ತಲಾ).

  

ಮೊದಲು ಗೋಧಿ ನುಚ್ಚನ್ನು ನುಣ್ಣಗೆ ರುಬ್ಬಿ, ನಂತರ ಬೇಳೆಗಳನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ, ಗೋಧಿ ಮಿಶ್ರಣಕ್ಕೆ ಸೇರಿಸಿ, ಉಪ್ಪು, ಚಿಟಿಕೆ ಇಂಗು ಹಾಕಿ ಕಲೆಸಿ, ಕಾದ ತವಾ ಮೇಲೆ ಸಾಮಾನ್ಯವಾಗಿ ದೋಸೆ ಮಾಡುವ ಹಾಗೆ, ಗರಿ ಗರಿಯಾಗಿ ಬೇಕಾದರೂ ಮಾಡಬಹುದು! ಮೆತ್ತಗೆ ಬೇಕಾದರೂ ಮಾಡಬಹುದು! ರುಬ್ಬಿದ ತಕ್ಷಣ ಮಾಡುವ ದೋಸೆ.

 

ಗೋಧಿ ಹಾಕಿರುವುದರಿಂದ ಮಧುಮೇಹಿಗಳಿಗೆ, Diet ಮಾಡುವವರಿಗೆ ಉತ್ತಮವಾದ ಆಹಾರ.

 

ಕ್ಯಾರೆಟ್ ಚಟ್ನಿ

ಮತ್ತೊಂದು ಆರೋಗ್ಯಕರ ರೆಸಿಪಿ!

 

1 ಈರುಳ್ಳಿ, 1 ಟೋಮೇಟೋ, 2 ಕ್ಯಾರೆಟ್ ಹೆಚ್ಚಿಡಿ.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಈರುಳ್ಳಿ, ಕ್ಯಾರೆಟ್, ಹಾಕಿ ಸ್ವಲ್ಪ ಹುರಿದು, ನಂತರ ಟೋಮೇಟೋ, ಉಪ್ಪು, 1 ಹಸಿ ಮೆಣಸಿನ ಕಾಯಿ, ನಾಲ್ಕು ಬ್ಯಾಡಗಿ ಮೆಣಸಿನ ಕಾಯಿ ಹಾಕಿ ಹುರಿದು, ಕ್ಯಾರೆಟ್ ಬೆಂದ ಮೇಲೆ ಒಲೆಯಿಂದ ತೆಗೆದು, ತಣ್ಣಗಾದ ಮೇಲೆ ಮೆಾದಲು ಮೆಣಸಿನ ಕಾಯಿ ಹಾಕಿ ರುಬ್ಬಿ, ನಂತರ ತರಕಾರಿಗಳನ್ನು ಹಾಕಿ ನುಣ್ಣಗೆ ರುಬ್ಬಿ, ಒಗ್ಗರಣೆಗೆ ಸಾಸಿವೆ, ಕರಿ ಬೇವು ಹಾಕಿ ಕಲೆಸಿ, ಗೋಧಿ ಅಡೈ ಜೊತೆ ಬಡಿಸಿ.

  

ಗೋಧಿ ನುಚ್ಚಿಗೆ ಬದಲಾಗಿ ಇದೇ ಅಳತೆ ಅಕ್ಕಿ ಹಾಕಿ ಅಡೈ ಮಾಡಬಹುದು. ಇನ್ನೂ ತೆಳ್ಳಗೆ PAPER DOSE ಹಾಗೇ ಬರುತ್ತೆ!

ಎರಡೂ ಆರೋಗ್ಯಕರ ರೆಸಿಪಿಗಳು! ಕಾಯಿ ಹಾಕಿಲ್ಲ! ಎಣ್ಣೆ ಕಡಿಮೆ! Low calories! ಮಾಡಿ ನೋಡಿ.

ಧನ್ಯವಾದಗಳು.