GASAGASE PAYASA ಗಸಗಸೆ ಪಾಯಸ
ಮಾಡುವ ವಿಧಾನ:-
4 ಚಮಚ ಟೇಬಲ್ ಚಮಚ ಗಸಗಸೆ (50 ಗ್ರಾಂ), 1 ಟೀ ಚಮಚ ಅಕ್ಕಿ ಬಿಸಿ ನೀರಲ್ಲಿ 1 ಗಂಟೆ ನೆನೆಸಿಡಿ. ನಂತರ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಸಾಧ್ಯವಾದಷ್ಟು ನುಣ್ಣಗೆ ರುಬ್ಬಿ.
4 ಟೇಬಲ್ ಚಮಚ ಬೆಲ್ಲ ಪುಡಿ ಮಾಡಿ ಸ್ವಲ್ಪ ನೀರು ಸೇರಿಸಿ ಬಿಸಿ ಮಾಡಿ ಕರಗಿದ ಮೇಲೆ ಬೆಲ್ಲವನ್ನು ಸೋಸಿಕೊಳ್ಳಿ. ದಪ್ಪ ತಳದ ಬಾಣಲೆಯಲ್ಲಿ ರುಬ್ಬಿದ ಗಸಗಸೆ ಮಿಶ್ರಣ, ಕರಗಿಸಿದ ಬೆಲ್ಲ ಹಾಕಿ ಸ್ವಲ್ಪ ನೀರು ಸೇರಿಸಿ ಮಧ್ಯಮ ಉರಿಯಲ್ಲಿ ಕೈ ಬಿಡದಂತೆ ತಿರುಗಿಸುತ್ತಾ ಕುದಿಸಿ, ನಂತರ ಅರ್ಧ ಲೋಟ ಹಾಲು, ಚಿಟಿಕೆ ಏಲಕ್ಕಿ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಕುದಿಸಿ ಒಲೆಯಿಂದ ಕೆಳಗಿಳಿಸಿ.
1 ಚಮಚ ತುಪ್ಪ ಹಾಕಿ ಸ್ವಲ್ಪ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ಪಾಯಕ್ಕೆ ಸೇರಿಸಿದರೆ ರುಚಿಯಾದ, ಆರೋಗ್ಯಕರವಾದ ಗಸಗಸೆ ಪಾಯಸ ಸಿದ್ಧ!
ನಾವು ಈ ರೆಸಿಪಿಯಲ್ಲಿ ಕಾಯಿ ತುರಿ ಹಾಕೋಲ್ಲ, ಕಾಯಿ ತುರಿ ಬೇಕಾದವರು 2 ಚಮಚ ರುಬ್ಬಲು ಹಾಕಿಕೊಳ್ಳಿ.
ಧನ್ಯವಾದಗಳು.