ಬೆಳ್ಳುಳ್ಳಿ ಒಂದು ಅದ್ಭುತವಾದ ತರಕಾರಿ! “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಗಾದೆಯಂತೆ ಅದರ ಮಹತ್ವದ ಬಗ್ಗೆ ಎಷ್ಟು ಹೇಳಿದರುಾ ಕಡಿಮೆಯೇ! ಅದರಿಂದ ರುಚಿಯಾದ ಮಂಚೂರಿ ಮಾಡುವ ರೆಸಿಪಿ ಬೆಳ್ಳುಳ್ಳಿ ಪ್ರಿಯರಿಗಾಗಿ!!!

ಮಾಡುವ ವಿಧಾನ :-

   

3 ಬೆಳ್ಳುಳ್ಳಿ ಸಿಪ್ಪೆ ತೆಗೆದು, ಚಿಕ್ಕಗಾಗಿ ಹೆಚ್ಚಿ, ಸ್ವಲ್ಪ ಜಜ್ಜಿ ಇಡಿ. 4 ಚಮಚ ಕಾರ್ನ್ ಫ್ಲೋರ್, 4 ಚಮಚ ಮೈದಾ, ಉಪ್ಪು, 1/2 ಚಮಚ ಖಾರಾ ಪುಡಿ ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ನೀರು ಚಿಮುಕಿಸಿ ಚಿಕ್ಕ ಚಿಕ್ಕ ಪಕೋಡ ಉಂಡೆಗಳಂತೆ ಮಾಡಿ ಕಾದ ಎಣ್ಣೆಗೆ ಹಾಕಿ ಕೆಂಪಗೆ ಕರಿಯಿರಿ. ತುಂಬಾ ಹೊತ್ತು ಬೇಯಿಸಬೇಡಿ. ಬೆಳ್ಳುಳ್ಳಿ ಕಹಿ ಆಗುತ್ತದೆ. ಎಲ್ಲಾ ಉಂಡೆಗಳನ್ನು ಕರಿದು Tissue paper/kitchen napkin ಮೇಲೆ ಹಾಕಿ ಹೆಚ್ಚಿನ ಎಣ್ಣೆ ತೆಗೆದು ಬಿಡಿ.

   

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, 1 ಹೆಚ್ಚಿದ ಈರುಳ್ಳಿ, 1/2 ಇಂಚು ಹೆಚ್ಚಿದ ಶುಂಠಿ, 2 ಸೀಳಿದ ಹಸಿ ಮೆಣಸಿನ ಕಾಯಿ, ತಲಾ 1 ಚಮಚ ಟೋಮೇಟೋ ಸಾಸ್, ವಿನಿಗರ್, ಸೋಯಾ ಸಾಸ್, ಕರಿದ ಉಂಡೆಗಳು ಹಾಕಿ ಚೆನ್ನಾಗಿ ಕಲೆಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ, ಟೋಮೇಟೋ ಸಾಸ್ ಜೊತೆ ತಿನ್ನಲು ಕೊಡಿ.

ಧನ್ಯವಾದಗಳು.